ಬೆಂಗಳೂರು: ಅಖಿಲ ಭಾರತ ವೀರಶೈವ ಪಂಚಮಸಾಲಿ ಸಮಾಜದ ವತಿಯಿಂದ ಇಂದು ಬೆಂಗಳೂರಿನ ರಾಜಾಜಿ ನಗರದ ರಾಷ್ಟ್ರೀಯ ಗೃಹ ನಿರ್ಮಾಣ ಸಹಕಾರ ಸಂಘದ ಕಚೇರಿಯಲ್ಲಿ ಪಂಚಮ ಸಾಲಿ ಸಮುದಾಯದ 2ಂ ಮೀಸಲಾತಿ ಪಡೆಯುವ ಬಗ್ಗೆ ಸುದ್ದಿಗೋಷ್ಟಿ ಕರೆಯಲಾಗಿತ್ತು.
ಈ ಸುದ್ದಿಗೋಷ್ಠಿಯಲ್ಲಿ ಸಮಾಜದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಶಿಕ್ಷಣ ಹಾಗೂ ವೃತ್ತಿಯಲ್ಲಿ ಅನುಕೂಲವಾಗುವ ದೃಷ್ಠಿಯಿಂದ 2ಂ ಮೀಸಲಾತಿ ನೀಡಬೇಕು ಎಂದು ಬೆಂಗಳೂರು ನಗರ ಪಂಚಮಸಾಲಿ ಸಮಾಜದ ಅಧ್ಯಕ್ಷ ಆನಂದ ಬಿರಾದಾರ ಮಾಧ್ಯಮಕ್ಕೆ ತಿಳಿಸಿದರು.
ಇದೇ ತಿಂಗಳು ಅಂದ್ರೆ ನಾಡಿದ್ದು, 13 ತಾರೀಖು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಬೆಳಗಾವಿ ಗಾಂಧಿ ಭವನದಿಂದ ಪ್ರಾರಂಭವಾಗಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಸಾಗಿ ಅಲ್ಲಿ ಇಷ್ಟ ಲಿಂಗ ಪೂಜೆ ಮಾಡುವ ಮೂಲಕ ಸಮಾಜದ ಶಕ್ತಿ ಪ್ರದರ್ಶನ ಮಾಡಲಾಗುವುದು.
ಪಂಚಮ ಸಾಲಿ ಸಮುದಾಯದ ಜಗದ್ಗುರು ಗಳಾದ ಶ್ರೀ ಶ್ರೀ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಮುದಾಯದ ಎಲ್ಲ ಜನಪ್ರತಿನಿಧಿಗಳು ಭಾಗವಹಿಸಿ ತಮ್ಮ 2ಂ ಮೀಸಲಾತಿ ಹಕ್ಕು ಈ ಸರ್ಕಾರ ನೀಡಬೇಕು ಎಂದು ಕಾಲ್ನಡಿಗೆಯಲ್ಲಿ ಬೃಹತ್ ಮೆರವಣಿಗೆ ಮೂಲಕ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಸಮುದಾಯದ ಎಲ್ಲರ ಒಕ್ಕೊರಲಿನ ಆಗ್ರಹ ವಾಗಿದೆ ಇಂದು ಆನಂದ್ ಬಿರಾದರ್ ಹೇಳಿದರು.
ಈ ಮಾಧ್ಯಮ ಗೋಷ್ಠಿಯಲ್ಲಿ ಸಮಾಜದ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಪುಟ್ಟರಾಜು ಹಳ್ಳದ, ಕಾಂತೇಶ್, ದಾನಪ್ಪಗೌಡರ್, ಮಲ್ಲನಗೌಡ, ಸದಾಶಿವ ಸೇರಿದಂತೆ ಹಲವರು ಉಪಸ್ಥಿತರಿದ್ದರು.