ಕನಕಪುರ: ರಾಜ್ಯ ಮಟ್ಟದ “ಬಾಪೂಜಿ ಪ್ರಬಂಧ” ಸ್ಪರ್ಧೆ ಯಲ್ಲಿ ಕನಕಪುರ ತಾಲ್ಲೂಕಿನ ಕಸಬಾ ಹೋಬಳಿಯ ತುಂಗಣಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿಧ್ಯಾರ್ಥಿನಿ ಕುಮಾರಿ ಹರ್ಷಿತ ದ್ವಿತೀಯ ಬಹುಮಾನವನ್ನು ಪಡೆದು ತಾಲ್ಲೂಕಿಗೆ ಕೀರ್ತಿ ತಂದಿದ್ದಾಳೆ.
ತುಂಗಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯಸಂದ್ರ ಗ್ರಾಮದ ಮಧ್ಯಮ ವರ್ಗದ ಕುಟುಂಬದ ಪುಟ್ಟಲಕ್ಷ್ಮಿ ಹಾಗೂ ಸುಕುಮಾರ್ ರವರ ಮಗಳಾದ ಕು.ಹರ್ಷಿತ ಬಹಳ ಪ್ರತಿಭಾನ್ವಿತ ವಿಧ್ಯಾರ್ಥಿನಿಯಾಗಿದ್ದು,8 & 9 ನೇ ತರಗತಿಯಲ್ಲಿ ಸಹ ಅತಿ ಹೆಚ್ಚಿನ ಅಂಕ ಪಡೆದು ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮದಿಂದ ಗೌರವಕ್ಕೆ ಪಾತ್ರಳಾಗಿದ್ದಳು.
ಈಗ ರಾಜ್ಯ ಮಟ್ಟದಲ್ಲಿ ನಡೆದಪ್ರಬಂಧ ಸ್ಪರ್ಧೆಯಲ್ಲಿ ಸರ್ಕಾರಿಹಾಗೂ ಖಾಸಾಗಿ ಶಾಲೆಗಳ ಸಾವಿರಾರು ಮಕ್ಕಳ ಪೈಕಿ ದ್ವಿತೀಯ ಸ್ಥಾನವನ್ನ ಪಡೆದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಪ್ರಶಸ್ತಿ ಸ್ವೀಕರಿಸುವ ಮೂಲಕ ತಾಲ್ಲೂಕಿಗೆ ಕಳಶಪ್ರಾಯವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ,
ಬಾಲಕಿಯ ಈ ಸಾಧನೆ ಕನಕಪುರಕ್ಕೆ ಕನಕಪ್ರಾಯವಾಗಿ ದ್ದು ಈ ವಿಧ್ಯಾರ್ಥಿನಿಯ ಭವಿಷ್ಯ ಉತ್ತಮವಾಗಿರಲೆಂದು ಕನಕಪುರದ ಪ್ರಗತಿಪರ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಕುಮಾರಸ್ವಾಮಿ ಹಾಗೂ ಪದಾಧಿಕಾರಿಗಳು ಶುಭ ಹಾರೈಸಿದ್ದಾರೆ.