ನಂಜನಗೂಡು: ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಮಾಂತರ ಪ್ರದೇಶದಲ್ಲಿ ಶಾಸಕರಾದ ದರ್ಶನ್ ಧ್ರುವನಾರಾಯಣ್ ಭೂಮಿ ಪೂಜೆ ನೆರವೇರಿಸಿದರು.ತಾಲೂಕಿನ ಗ್ರಾಮಗಳಾದ ಕರಳಪುರ, ಕೂಗಲೂರು, ಕೃಷ್ಣಪುರ, ಲಕ್ಷ್ಮಣಪುರ, ಕಸುವಿನಹಳ್ಳಿ, ಕುರಹಟ್ಟಿ ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿ, ಸಮುದಾಯ ಭವನ ನಿರ್ಮಾಣ ಮತ್ತು ಮುದ್ದಹಳ್ಳಿ ಗೇಟ್ ಬಳಿ ಹಂದಿ ಜೋಗಿ ಸಮುದಾಯಕ್ಕೆ ಬಡಾವಣೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತಂದು ಗ್ರಾಮಗಳಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.ಹಂದಿ ಜೋಗಿ ಸಮುದಾಯ ಸಮಾಜದಲ್ಲಿ ಮುಂದುವರಿಯಬೇಕಾದರೆ ಅವರಿಗೆ ಶೈಕ್ಷಣಿಕ ವ್ಯವಸ್ಥೆ ಮತ್ತು ಮೂಲಸೌಕರ್ಯಗಳನ್ನು ಕಲ್ಪಿಸಿ ನಗರಕ್ಕೆ ಹತ್ತಿರ ಇರುವ ಮತ್ತು ಬೆಳೆ ಬಾಳುವ ಜಾಗದಲ್ಲಿ ಬಡಾವಣೆ ನಿರ್ಮಿಸಿ ಶಾಶ್ವತವಾಗಿ ಸೂರು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಗ್ರಾ. ಪಂ ಅಧ್ಯಕ್ಷ ಮಹದೇವು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ. ಎಂ ಶಂಕರ್, ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠ ನಾಯಕ, ದಸಂಸ ಸಂಚಾಲಕರಾದ ಮಲ್ಲಹಳ್ಳಿ ನಾರಾಯಣ, ಹಂದಿ ಜೋಗಿ ಸಮುದಾಯದ ರಾಜ್ಯದ್ಯಕ್ಷ ವೆಂಕಟರಮಣ, ಸೋಮೇಶ್, ವಿಜಯ್ ಕುಮಾರ್, ಮಹೇಶ್, ತಗಡುರು ನಾಯಕ, ಸುರೇಶ್, ಕೃಷ್ಣ ಮೂರ್ತಿ ಸೇರಿದಂತೆ ಹಲವು ಮುಖಂಡರುಗಳು ಹಾಜರಿದ್ದರು.