This is the title of the web page
This is the title of the web page

ಒಡಿಶಾದಲ್ಲಿ 3.8 ತೀವ್ರತೆಯ ಭೂಕಂಪನ

ಭುವನೇಶ್ವರ್: ಇಂದು ಮುಂಜಾನೆ ಒಡಿಶಾದ ಕೊರಾಪುಟ್‍ನಲ್ಲಿ 3.8 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪವು ನೆಲದಿಂದ 5 ಕಿಲೋಮೀಟರ್ ಕೆಳಗೆ ಸಂಭವಿಸಿದೆ. ಇಂದು ಸಂಭವಿಸಿದ ಭೂಕಂಪ:3.8, 03-03-2023, 05:05:44 ISಖಿ, ಲ್ಯಾಟ್: 18.83 ಮತ್ತು ಉದ್ದ: 83.21, ಆಳ: 5 ಕಿಮೀ ,ಸ್ಥಳ: ಕೊರಾಪುಟ್ ಒಡಿಶಾ ಎಂದು ಭೂಕಂಪಶಾಸ್ತ್ರ ಕೇಂದ್ರ ಟ್ವೀಟ್ ಮಾಡಿದ್ದಾರೆ.

ಲಘು ಭೂಕಂಪನದ ತೀವ್ರತೆಯಿಂದಾಗಿ ರಾಜ್ಯದಲ್ಲಿ ಯಾವುದೇ ಆಸ್ತಿಪಾಸ್ತಿ ಅಥವಾ ಪ್ರಾಣ ಹಾನಿ ಸಂಭವಿಸಿಲ್ಲ. ಭೂಕಂಪದ ಕೇಂದ್ರಬಿಂದು ಛತ್ತೀಸ್‍ಗಢದ ಜಗದಲ್‍ಪುರದಿಂದ ಪೂರ್ವಕ್ಕೆ 129 ಕಿಲೋಮೀಟರ್ ದೂರದಲ್ಲಿದೆ. ನಾರಾಯಣಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸ್ಥಳೀಯ ಜನರಿಗೆ ಭೂಕಂಪದ ಅನುಭವವಾಗಿದೆ.

ಇದರಿಂದ ಅಲ್ಲಿಯ ಜನರು ಭಯಭೀತರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸೌಮ್ಯವಾದ ಕಂಪನದಿಂದಾಗಿ, ಜನರು ಭಯಗೊಂಡು ತಮ್ಮ ಮನೆಗಳಿಂದ ಹೊರಬಂದಿದ್ದಾರೆ.