This is the title of the web page
This is the title of the web page

ಪೈಲಟ್ ಮಾಡಿದ ಎಡವಟ್ಟಿಗೆ 3 ತಿಂಗಳು ಅಮಾನತು ಶಿಕ್ಷೆ, ಏರ್ ಲೈನ್ಸ್ ಗೆ 30 ಲಕ್ಷ ರೂ. ದಂಡ

ನವದೆಹಲಿ: ಏರ್ ಇಂಡಿಯಾ ವಿಮಾನದ ಪೈಲಟ್ ಮಾಡಿದ ಒಂದು ಎಡವಟ್ಟಿಗೆ ಇದೀಗ ಪೈಲಟ್ ಮೂರು ತಿಂಗಳು ಅಮಾನತಿನ ಶಿಕ್ಷೆಗೆ ಗುರಿಯಾದರೆ, ಏರ್ ಲೈನ್ಸ್ ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ 30 ಲಕ್ಷ ರೂ ದಂಡ ವಿಧಿಸಿದೆ.

ವಿಷಯ ಇಲ್ಲಿದೆ : ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ಘಟನೆಯೊಂದರಲ್ಲಿ ದುಬೈನಿಂದ ದೆಹಲಿಗೆ ಏರ್ ಇಂಡಿಯಾ ವಿಮಾನವೊಂದು ಪ್ರಯಾಣಿಕರನ್ನು ಹೊತ್ತು ಹೊರಟಿತ್ತು ಈ ವೇಳೆ ವಿಮಾನದ ಪೈಲಟ್ ತನ್ನ ಮಹಿಳಾ ಸ್ನೇಹಿತೆಯನ್ನು ಕಾಕ್‍ಪಿಟ್ ಒಳಗೆ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾನೆ ಈ ಕಾರಣಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್ ಗೆ ಮೂರು ತಿಂಗಳುಗಳ ಕಾಲ ಅಮಾನತಿನ ಶಿಕ್ಷೆ ನೀಡಿದೆ ಅಲ್ಲದೆ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಫಲರಾದ ಕಾರಣಕ್ಕಾಗಿ ಏರ್‍ಲೈನ್‍ಗೆ 30 ಲಕ್ಷ ರೂ.ದಂಡ ವಿಧಿಸಿದೆ.

ಪೈಲಟ್ ಕಾಕ್‍ಪಿಟ್ ಒಳಗೆ ತನ್ನ ಗೆಳತಿಯನ್ನು ಕರೆಸಿ ನಿಯಮ ಉಲ್ಲಂಘಿಸಿದ್ದಾರೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಹೇಳಿಕೆ ನೀಡಿದೆ ಅಲ್ಲದೆ ಪೈಲಟ್ ಮಾಡಿರುವ ತಪ್ಪನ್ನು ಬಗೆಹರಿಸುವಲ್ಲಿ ವಿಮಾನಯಾನ ಸಂಸ್ಥೆ ವಿಫಲವಾಗಿದೆ ಎಂದು 30 ಲಕ್ಷ ರೂ. ದಂಡವಿಧಿಸಿದೆ.