ಕಾನ್ಪುರ: ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್ ನಲ್ಲಿ 300 ವಿಕೆಟ್ ಪಡೆದ ಆಟಗಾರರ ಕ್ಲಬ್ ಗೆ ಸೇರ್ಪಡೆಯಾಗಿದ್ದಾರೆ.ಈ ಸಾಧನೆ ಮಾಡಿದ ಭಾರತದ 7ನೇ ಬೌಲರ್ ಅವರಾಗಿದ್ದಾರೆ. ಬಾಂಗ್ಲಾದೇಶ ಎದುರಿನ ಎರಡನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಖಲಿದ್ ಅಹಮದ್ ವಿಕೆಟ್ ಪಡೆದ ಜಡೇಜಾ ಈ ದಾಖಲೆ ಸೃಷ್ಟಿಸಿದ್ದಾರೆ.
ಅಲ್ಲದೆ, ಅತಿ ವೇಗವಾಗಿ 3000 ರನ್ ಮತ್ತು 300 ವಿಕೆಟ್ ಪಡೆದ ವಿಶ್ವದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕಿಂತ ಮೊದಲು ಇಂಗ್ಲೆಂಡ್ ನ ಈ ದಾಖಲೆ ನಿರ್ಮಿಸಿದ್ದಾರೆ.ಜಡೇಜಾ ಟೆಸ್ಟ್ ಕ್ರಿಕೆಟ್ ನಲ್ಲಿ ಮೂರು ಸಾವಿರ ರನ್ ಮತ್ತು 300 ವಿಕೆಟ್ ಗಳಿಸಿದ ಭಾರತದ ಮೂರನೇ ಹಾಗೂ ವಿಶ್ವದ 11ನೇ ಆಟಗಾರ ಎನಿಸಿಕೊಂಡಿದ್ದಾರೆ.
ಭಾರತದ ಅಶ್ವಿನ್, ಕಪಿಲ್ ದೇವ್, ನ್ಯೂಜಿಲೆಂಡ್ ನ ಹಾಡ್ಲಿ, ವೆಟ್ಟೋರಿ, ಆಸ್ಟ್ರೇಲಿಯಾದ ವಾರ್ನ್, ಇಂಗ್ಲೆಂಡ್ ನ ಬ್ರಾಡ್, ದಕ್ಷಿಣ ಆಫ್ರಿಕಾದ ಶಾನ್ ಪೆÇಲಾಕ್, ಪಾಕಿಸ್ತಾನದ ಇಮ್ರಾನ್ ಖಾನ್, ಶ್ರೀಲಂಕಾದ ಚಾಮಿಂಡಾ ವಾಸ್ ಈ ಸಾಧನೆ ಮಾಡಿದ್ದಾರೆ. 300ಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತೀಯರ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ(619), ಆರ್. ಅಶ್ವಿನ್(524) ಕಪಿಲ್ ದೇವ್(434), ಹರ್ಭಜನ್ ಸಿಂಗ್(417), ಇಶಾಂತ್ ಶರ್ಮಾ(311), ಜಹೀರ್ ಖಾನ್(311), ರವೀಂದ್ರ ಜಡೇಜಾ 300 ವಿಕೆಟ್ ಪಡೆದಿದ್ದಾರೆ.