ಚಿಕ್ಕಬಳ್ಳಾಪುರ: ಜಿಲ್ಲಾಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಇವರ ಸಂಯುಕ್ತ
ಆಶ್ರಯದಲ್ಲಿ ನಗರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ನಡೆದ ಬಾಲಕ ಮತ್ತು
ಬಾಲಕಿಯರ ಜಿಲ್ಲಾ ಮಟ್ಟದ ಕರಾಟೆ ಹಾಗೂ ಜೂಡೋ ಸ್ಪರ್ಧೆಗಳನ್ನು
ಆಯೋಜಿಸಿದ್ದು ಇದರಲ್ಲಿ ನಗರದ ೩೦ಕೆ.ಜಿ. ವಿಭಾಗದಲ್ಲಿ ಸುಚಲ್ ಪಿ.ಜಿ. ಎಂಬ
ಬಾಲಕಿ ಭಾಗವಹಿಸಿ ಜೂಡೋ ಪ್ರಥಮ ಮತ್ತು ಕರಾಟೆಯಲ್ಲಿ ದ್ವಿತೀಯ ಸ್ಥಾನ
ಗಳಿಸಿದ್ದಾರೆ. ಇವರನ್ನು ಮುಖ್ಯ ತರಬೇತಿದಾರರಾದ ಶಿಹಾನ್ ನಾಸಿರುದ್ದೀನ್ ಪಿ.ವೈ
ಮತ್ತು ದೈಹಿಕ ಶಿಕ್ಷಕರಾದ ಶಶಿಕುಮಾರ್ರವರು ಅಭಿನಂದಿಸಿದ್ದಾರೆ
