ಆನೇಕಲ್ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಾಗೂ ವಿಜಯ ದಶಮಿ ಪಥ ಸಂಚಲನದ ಅಂಗವಾಗಿ ದೊಮ್ಮಸಂದ್ರ ಗ್ರಾಮದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ಯರ್ತರು ಮತ್ತು ಸಮಾಜ ಸೇವಕರಾದ ಭರತ್ ಧನರಾಜ್ ಮತ್ತು ನಯನ ದಂಪತಿಗಳ ೦೫ ತಿಂಗಳ ಪುಟ್ಟ ಕಂದಮ್ಮ ಗಣವೇಷದಾರಿಯಾಗಿ ಉಡುಗೆ ತೊಟ್ಟು ಕಂಡಿದ್ದು ವಿಶೇಷವಾಗಿತ್ತು.
ಇನ್ನೂ ತಂದೆ ಭರತ್ ಧನರಾಜ್ ರವರು ಸಂಘದ ಸಕ್ರಿಯ ಕರ್ಯರ್ತರಾಗಿದ್ದು ಇಂದು ರಾಷ್ಠೀಯ ಸ್ವಯಂ ಸೇವಕ ಸಂಘ ದೊಮ್ಮಸಂದ್ರ ನಗರದ ವತಿಯಿಂದ ಆಯೋಜಿಸಲಾಗಿದ್ದ ವಿಜಯ ದಶಮಿ ಪಥ ಸಂಚಲನ ಕರ್ಯಕ್ರಮದಲ್ಲಿ ಗಣವೇಷದಾರಿಗಳಾಗಿ ಮುತ್ತಾನಲ್ಲೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೆಜ್ಜೆ ಹಾಕಿ ರಾಷ್ಟ್ರಭಕ್ತಿ. ಶಿಸ್ತು ಮತ್ತು ಸಂಘ ಸ್ಫರ್ತಿ ತುಂಬಿದ ಪಥ ಸಂಚಲನ ನಡೆಸಿದರು.