ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ ಅವರು ಹೆಬ್ಬಾಳ ಕ್ಷೇತ್ರದ ಆರ್.ಎಂ.ವಿ ಕ್ಲಬ್ ರಸ್ತೆ ಮತ್ತು ಆರ್.ಎಂ.ವಿ ಪಾರ್ಕ್ ಬಳಿಯ ರಸ್ತೆಗಳಿಗೆ ಡಾಂಬರೀಕರಣ ಕಾಮಗಾರಿ, ಅಮರಜ್ಯೋತಿ ಬಡಾವಣೆಯ ಕುಪ್ಪರಾಜ ಪಾರ್ಕ್, ವಿಶ್ವೇಶ್ವರಯ್ಯ ಪಾರ್ಕ್, ಆದರ್ಶ ಪಾರ್ಕ್, ರವೀಂದ್ರನಾಥ್ ಠ್ಯಾಗೋರ್ ಪಾರ್ಕ್ ನಲ್ಲಿ ನೂತನ ಕೊಳವೆ ಬಾವಿ ಕೊರೆಸುವ ಕಾಮಗಾರಿಗೆ ಮತ್ತು ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಇದ್ದರು.