ಬೆಂಗಳೂರು: ಚೆನ್ನೆöÊನಲ್ಲಿ ನಡೆದ ೨೨ನೇ ಆಲ್ ಇಂಡಿಯಾ ಮವಾಟೆ-ಕಾಶಿತೋ ಖಙU ಓಪನ್ ಕರಾಟೆ ಚಾಂಪಿಯನ್ಶಿಪ್ – ೨೦೨೫ ಸ್ಪರ್ಧೆಯಲ್ಲಿ ನಾರಾಯಣ ಒಲಿಂಪಿಯಾಡ್ ಶಾಲೆ, ಸರಸ್ವತಿ ಭವನ – ಗೋರವಿಗೇರೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ.
ವಿಜೇತರು: ಮಾಸ್ಟರ್ ಲಕ್ಷಿ÷್ಮÃ ದೀಸನ್ (ಖಗಿ – ೮ನೇ ಇ-ಟೆಕ್ನೋ) -ಪ್ರಥಮ ಸ್ಥಾನ. ಮಾಸ್ಟರ್ ಓಂಕರ ಸಾಗರ್ (೯ನೇ ಇ-ಟೆಕ್ನೋ)- ದ್ವಿತೀಯ ಸ್ಥಾನ
ಶಾಲೆಯ ಪ್ರಾಂಶುಪಾಲರಾದ ಲೋಲ್ಲಾ ಪವನಾರ್ಕ್ ಮತ್ತು ಎ.ಜಿ.ಎಂ. ಪಿ. ಶ್ರೀನಿವಾಸುಲು ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿ, ಅಕಾಡೆಮಿಕ್ ಶಿಕ್ಷಣದ ಜೊತೆಗೆ ಕ್ರೀಡೆಗಳು ಹಾಗೂ ಸಹ ಪಾಠ್ಯ ಚಟುವಟಿಕೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ಶಕ್ತಿ ಮತ್ತು ಸಕಾರಾತ್ಮಕ ಮನೋಭಾವವನ್ನು ಬೆಳೆಸುತ್ತವೆ ಎಂದು ಹೇಳಿದರು.
ಅವರು ಮುಂದುವರಿದು, ನಾರಾಯಣ ಒಲಿಂಪಿಯಾಡ್ ಶಾಲೆ- ಗೋರವಿಗೇರಿ ಕ್ಯಾಂಪಸ್ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುತ್ತದೆ ಎಂದು ತಿಳಿಸಿದರು. ಶಾಲೆಯಲ್ಲಿ ನಿಯಮಿತವಾಗಿ ಕರಾಟೆ, ಯೋಗ, ನೃತ್ಯ ಮತ್ತು ಕ್ಲಬ್ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ.
ಈ ಸಾಧನೆಗೆ ಕಾರಣರಾದ ವಿದ್ಯಾರ್ಥಿಗಳು, ಹೆಮ್ಮೆಯ ಪೋಷಕರು ಮತ್ತು ನಿಷ್ಠಾವಂತ ಕರಾಟೆ ತರಬೇತುದಾರ್ತಿ ಮಾಲ್ಯಾ ಮ್ಯಾಡಂ ಅವರಿಗೆ ಶಾಲಾ ನಿರ್ವಹಣಾ ಮಂಡಳಿ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ)