ಬೆಂಗಳೂರು: ನಗರದಲ್ಲಿ ಅಪಘಾತಗಳ ಸಂಖ್ಯೆ ಜಾಸ್ತಿಯಾಗಿ ಮೃತಪಟ್ಟವರ ಸಂಖ್ಯೆಯೂ ಸಹ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದರವರು ನಿನ್ನೆ ರಾತ್ರಿ ವಾಹನಗಳ ಚಾಲನೆ ಮಾಡಿ ಮದ್ಯಪಾನ ಮಾಡಿ ಚಲಾಯಿಸುವವರ ವಿರುದ್ಧ ಸಂಚಾರಿ ಪೊಲೀಸರಿಗೆ ದೂರು ದಾಖಲಿಸಲು ಆದೇಶ ನೀಡಿದ್ದರು.
ಈ ಹಿನ್ನೆಲೆಯಲ್ಲಿ ನಾಲಕ್ಕು ಸಂಚಾರಿ ಡಿಸಿಪಿ ವಿಭಾಗದ ಐವತ್ತಾರು ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ನಗರದಲ್ಲಿಡೆ 17361 ವಾಹನಗಳ ತಪಾಸಣೆ ನಡೆಸಿರುತ್ತಾರೆ.
17361 ತಪಾಸಣೆ ನಡೆಸಿದ ಪೊಲೀಸರು 386 ಮದ್ಯಪಾನ ಮಾಡಿದ ವಾಹನ ಚಲಾ ಯಿಸುತ್ತಿದ್ದ ಚಾಲಕರಗಳ ವಿರುದ್ಧ ದೂರು ದಾಖಲಿಸಿರುತ್ತಾರೆ ಮತ್ತು ವಾಹನಗಳನ್ನು ಜಪ್ತಿ ಮಾಡಿರುತ್ತಾರೆ.