ಹರಾರೆ: ಸರಣಿ ಸಮ ಬಲಗೊಂಡಿತು, ಸರಣಿ ಮುನ್ನ ಡೆಯೂ ಸಿಕ್ಕಿತು, ಇನ್ನು ಯಂಗ್ ಇಂಡಿಯಾ ಮುಂದಿರುವುದು ಸರಣಿ ಗೆಲುವಿನ ಸರದಿ.ಮೊದಲ ಪಂದ್ಯದಲ್ಲಿ ಅನಿರೀಕ್ಷಿತ ಆಘಾತಕ್ಕೆ ಸಿಲುಕಿದ ಬಳಿಕ ಸರ್ವಾಂಗೀಣ ಪ್ರದರ್ಶನ ನೀಡುತ್ತ ಬಂದಿರುವ ಭಾರತ ತಂಡವೀಗ ಆತಿಥೇಯ ಜಿಂಬಾಬ್ವೆ ವಿರುದ್ಧ ಟಿ20 ಸರಣಿ ವಶಪಡಿಸಿಕೊಳ್ಳಲು ಸಜ್ಜುಗೊಂಡು ನಿಂತಿದೆ.
ಶನಿವಾರ ಹರಾರೆ ಅಂಗಳ ದಲ್ಲೇ 4ನೇ ಮುಖಾ ಮುಖಿ ಏರ್ಪಡಲಿದ್ದು, ಇದನ್ನು ಗೆದ್ದರೆ ಸರಣಿ ಗಿಲ್ ಬಳಗದ ಪಾಲಾಗಲಿದೆ. ಇದು ಟಿ20 ವಿಶ್ವಕಪ್ ಗೆದ್ದ `ಸೀನಿಯರ್ ತಂಡ’ಕ್ಕೆ ಕಿರಿಯರು ಸಲ್ಲಿಸಲಿರುವ ಉತ್ತಮ ಉಡುಗೊರೆ ಎಂದು ಪರಿಗಣಿಸಬಹುದು.
ಇನ್ನೊಂದೆಡೆ ಜಿಂಬಾಬ್ವೆ ಈ ಸರಣಿಯನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಬೇಕಿದೆ. ಮೊದಲ ಪಂದ್ಯದ ಜೋಶ್ ಅನಂತರ ಕಂಡುಬಂದಿಲ್ಲ.