ಬೆಂಗಳೂರು : ಯಶವಂತಪುರ ಮತ್ತು ಆರ್ ಟಿ ನಗರ ಪೊಲೀಸರು ೪ ಜನ ಆರೋಪಿಗಳನ್ನು ಗಾಂಜಾ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬಂಧಿಸಿ ಎರಡು ಲಕ್ಷ ರೂಪಾಯಿ ಬೆಲೆ ಬಾಳುವ ಗಾಂಜಾ ವಶಪಡಿಸಿಕೊಂಡಿರುತ್ತಾರೆ. ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ಸ್ಟೇಷನ್ ಬಳಿ ಒರಿಸ್ಸಾ ರಾಜ್ಯದ ತಪಸ್ಕುಮಾರ್ ಮಹಂತಿ(೩೩) ವರ್ಷ ಈತನನ್ನು ಬಂಧಿಸಿ ಒಂದೂವರೆ ಕೆಜಿ ವಶಪಡಿಸಿಕೊಂಡಿರುತ್ತಾರೆ. ಆರ್ ಟಿ ನಗರ ಪೊಲೀಸರು ಶರ್ಬುದ್ದೀನ್, ಮೌಸಿನ್ ಖಾನ್ ಮತ್ತು ನವೀದ್ ಪಾಷಾ ಮೂರು ಜನ ಆರೋಪಿಗಳನ್ನು ಬಂಧಿಸಿ ೪೭೩ ಕೆಜಿ ಬೆಲೆಬಾಳುವ ಗಾಂಜಾ ವಶಪಡಿಸಿಕೊಂಡಿರುತ್ತಾರೆ.



