ಬೆಂಗಳೂರು: ಬ್ಯಾಡ್ರಳ್ಳಿಪೊ ಲೀಸರು ದರೋಡೆ ಸುಲಿಗೆ ಮತ್ತು ಇತರೆ ಪ್ರಕರಣಗಳಲ್ಲಿ ಭಾಗಿಯಾಗಿ ಕಾನೂನು ಸಂಘರ್ಷಕೊಳಗಾಗಿದ್ದ ಅಪ್ರಾಪ್ತ ನಾಲ್ವರು ಬಾಲಕರನ್ನು ಬಂಧಿಸಿ 7 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.
ಈ ಬಾಲಕರುಗಳು ಕಾಮಾಕ್ಷಿಪಾಳ್ಯ ಬಗಲಗುಂಟೆ ಮತ್ತು ಮಹಾಲಕ್ಷ್ಮಿ ವ್ಯಾಪ್ತಿಗಳಲ್ಲಿ ದರೋಡೆ ಸುಲಿಗೆ ಹಾಗೂ ಇತರ ಪ್ರಕರಣಗಳಲ್ಲಿ ಸಾರ್ವಜನಿಕರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ ಮಾಡುತ್ತಿದ್ದಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಇವರುಗಳಿಂದ ಮೊಬೈಲ್ ಫೋನ್, ದ್ವಿಚಕ್ರ ವಾಹನ ಹಾಗೂ ರೂ.1000 ನಗದು ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.