ಬೆAಗಳೂರು: ೪೦ನೇ ರಾಜ್ಯ ಮಟ್ಟದ ಸಬ್ ಜೂನಿಯರ್, ಕೆಡಿಟ್, ಜೂನಿಯರ್ ಮತ್ತು ಸೀನಿಯರ್ ಟೇಕ್ವಾಂಡೋ ಪಂದ್ಯಾವಳಿ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಮಲೆಬೆನ್ನೂರಿನಲ್ಲಿ ನ.೬ ,೭ ಮತ್ತು ೮ರಂದು ನಡೆದಿದ್ದು, ವಿವಿಧ ವಿಭಾಗಗಳಲ್ಲಿ ತುಮಕೂರು, ಬೆಂಗಳೂರು, ಚಿತ್ರದುರ್ಗ ತಂಡಗಳು ಪಾರಮ್ಯ ಸಾಧಿಸಿವೆ. ಸಬ್ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ತುಮಕೂರು ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ಚಿತ್ರದುರ್ಗ ದ್ವಿತೀಯ, ಬೆಂಗಳೂರು ತೃತೀಯ ಸ್ಥಾನ ಪಡೆದುಕೊಂಡಿತು. ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ಬೆಂಗಳೂರು ಪ್ರಥಮ, ತುಮಕೂರು ದ್ವಿತೀಯ ಮತ್ತು ದಾವಣಗೆರೆ ತೃತೀಯ ಸ್ಥಾನ ಪಡೆಯಿತು. ಕೆಡಿಟ್ ಬಾಲಕಿಯರ ವಿಭಾಗದಲ್ಲಿ ತುಮಕೂರು, ಬೆಂಗಳೂರು ಮತ್ತು ಚಿತ್ರದುರ್ಗ, ಕೆಡಿಟ್ ಬಾಲಕರ ವಿಭಾಗದಲ್ಲಿ ತುಮಕೂರು, ಚಿತ್ರದುರ್ಗ ಮತ್ತು ಬೆಳಗಾವಿ, ಜೂನಿಯರ್ ಬಾಲಕಿಯರ ವಿಭಾಗ ಮಟ್ಟದಲ್ಲಿ ಚಿತ್ರದುರ್ಗ ಪ್ರಥಮ, ದಾವಣಗೆರೆ ದ್ವಿತೀಯ
ಮತ್ತು ಬೆಂಗಳೂರು ತೃತೀಯ ಸ್ಥಾನ ಪಡೆದುಕೊಂಡಿತು.
ಜೂನಿಯರ್ ಬಾಲಕರ ವಿಭಾಗ ಮಟ್ಟದಲ್ಲಿ ಬೆಂಗಳೂರು, ಚಿತ್ರದುರ್ಗ ಮತ್ತು ದಾವಣಗೆರೆ, ಸೀನಿಯರ್ ಬಾಲಕಿಯರ ವಿಭಾಗ ಮಟ್ಟದಲ್ಲಿ ಬೆಂಗಳೂರು, ತುಮಕೂರು ಮತ್ತು ದಾವಣಗೆರೆ ಪ್ರಶಸ್ತಿ ಮುಡಿಗೇರಿಸಿಕೊಂಡಿತು ಎಂದು ಕರ್ನಾಟಕ ಟೇಕ್ವಾಂಡೋ ಅಸೋಸಿಯೇಷನ್ ಅಧ್ಯಕ್ಷ ಜೆ. ತಿರುಮಲ ತಿಳಿಸಿದ್ದಾರೆ. ಕ್ರೀಡಾಕೂಟದಲ್ಲಿ ೫೦೦ ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಸಂಸ್ಥೆಯ ಸಿಇಒ ಮನಫುಶ್, ಕಾರ್ಯದರ್ಶಿಗಳಾದ ವೆಂಕಟೇಶ್, ಜಂಟಿ ಕಾರ್ಯದರ್ಶಿ ಶ್ರೀಕಾಂತ, ಖಜಾಂಚಿ ಅನಿತಾ, ಎಂ ಸುನೀತ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ ತೀರ್ಪುಗಾರರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ರಾಜ್ಯಮಟ್ಟದಲ್ಲಿ ಬಂಗಾರದ ಪದಕ ಪಡೆದ ಕೆಡಿಟ್ ಮತ್ತು ಸೀನಿಯರ್ ವಲಯದ ಕ್ರೀಡಾಪಟುಗಳು ಇದೇ ತಿಂಗಳು ೨೧,೨೨, ಮತ್ತು ೨೩ ಉತ್ತರ ಪ್ರದೇಶದಲ್ಲಿ ನಡೆಯಲಿರುವ ರಾಷ್ಟç ಮಟ್ಟಕ್ಕೆ ಆಯ್ಕೆ ಆಗಿದ್ದಾರೆ ಎಂದು ತಿಳಿಸಿದರು.



