ಬೆಂಗಳೂರು: ಸಾಕ್ರಾ ವರ್ಲ್ಡ್ ಆಸ್ಪತ್ರೆಯು ಮೇ ತಿಂಗಳೊಂದರಲ್ಲಿ ಸುಮಾರು 425 ಮೂಳೆ ಸಂಬಂಧಿತ ಶಸ್ತ್ರಚಿಕಿತ್ಸೆ ನಡೆಸಿದೆ. ಮೂಳೆವಿಭಾಗದ ಮುಖ್ಯಸ್ಥ ಡಾ. ಚಂದ್ರಶೇಖರ್ ಪಿ ಅವರ ಮಾರ್ಗದರ್ಶನದಲ್ಲಿ ಒಟ್ಟು 15 ಮಂದಿ ಇರುವ ನುರಿತ ವೈದ್ಯರ ತಂಡವು ಇಷ್ಟು ಶಸ್ತ್ರಚಿಕಿತ್ಸೆಯನ್ನು ನಡೆಸಿದೆ.
ಇದೇ ಒಟ್ಟು 275 ಮಂದಿಗೆ ಮಂಡಿಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ದಾಖಲೆ ಮಾಡಿದೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರ ಪೈಕಿ 83ವರ್ಷದ ಹಿರಿಯರು ಮತ್ತು 46 ವರ್ಷದ ಕಿರಿಯರು ಇದ್ದಾರೆ. ಕೇವಲ ಮೂವತ್ತು ದಿನಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಶಸ್ತ್ರಚಿಕಿತ್ಸೆ ನಡೆಸಿರುವ ಹೆಗ್ಗಳಿಕೆ ರಾಜ್ಯದಲ್ಲಿಯೇ ಸಾಕ್ರಾ ವರ್ಲ್ಡ್ ಆಸ್ಪತ್ರೆ ಪಡೆದುಕೊಂಡಿದೆ.
ಕಳೆದ 11 ವರ್ಷಗಳಿಂದ 30,000 ಕ್ಕೂ ಹೆಚ್ಚು ಮೂಳೆಸಂಬಂಧಿತ ಶಸ್ತ್ರಚಿಕಿತ್ಸೆಯನ್ನು ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿಯೇ ನಡೆಸಲಾಗಿದೆ. ರೋಗಿಯ ದೇಹರಚನೆಯನ್ನು ಸಮರ್ಪಕವಾಗಿ ಅರ್ಥೈಸಿಕೊಂಡು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡುವ ಪದ್ಧತಿಯನ್ನು ಅಳವಡಿಸಿಕೊಂಡಿರುವುದರಿಂದ ಮೂಳೆ ಸಂಬಂಧಿತ ಪ್ರಕರಣಗಳನ್ನು ಹೆಚ್ಚು ಹೆಚ್ಚುಗುರುತಿಸಿ, ಚಿಕಿತ್ಸೆ ನೀಡಲಾಗಿದೆ.
ಸಾಮಾನ್ಯವಾಗಿ ವಯಸ್ಸಾದಂತೆ, ಅತಿಯಾದ ವ್ಯಾಯಾಮ ಹಾಗೂ ಇತರೆ ಸಂದರ್ಭಗಳಲ್ಲಿ ಮೂಳೆ ಜಾರುವುದು, ಅಸ್ಥಿಮಜ್ಜೆಯ ವ್ಯತ್ಯಯಗಳು ಉಂಟಾಗುವುದು ಸಹಜ. ಇದನ್ನು ಸಕಾಲದಲ್ಲಿ ಗುರುತಿಸಿ, ಚಿಕಿತ್ಸೆ ನೀಡಿರುವುದರಿಂದ ರೋಗಿಗಳು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಆಸ್ಪತ್ರೆಯು ಹೇಳಿಕೊಂಡಿದೆ. ಮೂಳೆ ಸವೆತ ಉಂಟಾದಂತೆ ಮಂಡಿನೋವು ಹೆಚ್ಚುತ್ತದೆ. ಮಂಡಿಚಿಪ್ಪುಗಳ ಸಮರ್ಪಕ ಬದಲಾವಣೆಯಿಂದ ರೋಗಿಯು ಮೊದಲಿನಂತೆ ಓಡಾಡಲು ಸಾಧ್ಯವಾಗಿದೆ.
ಡಾ.ಪಿ.ಚಂದ್ರಶೇಖರ್ ಮಾತನಡಿ, ಇಲ್ಲಿಯವರೆಗೆ ಆಸ್ಪತ್ರೆಯನ್ನು ಸಂರ್ಪಕಿಸಿದ್ದ ಮೂಳೆ ಸಂಬಂಧಿತ ಸಮಸ್ಯೆಗಳಿಂದ ನರಳುತ್ತಿದ್ದ ರೋಗಿಗಳು ಖುಷಿಯಿಂದ ಮನೆಗೆ ವಾಪಸ್ ತಲುಪಿದ್ದಾರೆ. ಇದು ನಿಜಕ್ಕೂ ಖುಷಿ ಪಡುವ ವಿಷಯ. ಮೂಳೆಯಿಂದ ಉಂಟಾಗುವ ಸಮಸ್ಯೆಗಳಿಗೆ ಫಿಸಿಯೋಥೆರಪಿ, ಜೀವನಶೈಲಿಯಲ್ಲಿ ಬದಲಾವಣೆಯಿಂದ ನೋವು ಕಡಿಮೆಯಾಗಿ ಅವರ ಮುಖದಲ್ಲಿ ನಗು ಅರಳಿದೆ ಎಂದರು.
ಈ ಬಗ್ಗೆ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವ್ಕೇಶ್ ಫಾಸು ಹೇಳಿದ್ದು ಹೀಗೆ ಇದೊಂದು ಖುಷಿಯ ವಿಚಾರ. ನುರಿತ ವೈದ್ಯರ ತಂಡ ಇರುವುದರಿಂದ ಗುಣಮಟ್ಟದ ಚಿಕಿತ್ಸೆ ನೀಡಲು ಸಾಧ್ಯವಾಗಿದೆ ಎಂದರು.ಎಲ್ಲ ವಿಭಾಗಗಳಲ್ಲಿಯೂ ಆಸ್ಪತ್ರೆಯು ಉತ್ತಮ ನಿರ್ವಹಣೆಯನ್ನು ತೋರಿಸಿದೆ. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದೇ ಮುಖ್ಯ ಗುರಿ. ಈ ನಿಟ್ಟಿನಲ್ಲಿ ವೈದ್ಯರ ತಂಡದ ಕಾರ್ಯ ಶ್ಲಾಘನೀಯ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ನಯೋ ಮತ್ಸೋಮಿ ಹೇಳಿದರು.