ಬೆಂಗಳೂರು: ರಾಜ್ಯ ಸರ್ಕಾರ ಯುವ ನಿಧಿ ಯೋಜನೆಯನ್ನು ಜಾರಿಗೆ ತರಲು ಈಗಾಗಲೇ ಘೋಷಣೆ ಮಾಡಿದ್ದು, ಯೋಜನೆಗೆ ಸಂಬಂಧಪಟ್ಟಂತೆ ಒಟ್ಟು 5 ಲಕ್ಷ 2953 ಫಲಾನುಭಿವಿಗಳನ್ನು ಗುರುತಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ ಶೀಲತಾ ಮತ್ತು ಜೀವನೋಪಾಯ ಇಲಾಖೆ ಸಚಿವ ಶರಣಪ್ರಕಾಶ ಪಾಟೀಲ್ ಫಲಾನುಭವಿಗಳ ಪೈಕಿ 481000 ಪದವಿಧರರು ಹಾಗೂ ಡಿಪ್ಲೊಮಾ ತೇರ್ಗಡೆಯಾದವರು 48153ಮಂದಿ ಇರುವರು ಎಂದು ವಿವರ ನೀಡಿದ್ದಾರೆ.
ಪ್ರಸಕ್ತ 2023-24ಸಾಲಿಗೆ ನಿರುದ್ಯೋಗ್ಯ ಭತ್ಯೆ ನೀಡಲು 250 ಕೋಟಿ. ರೂಪಾಯಿಗಳನ್ನು ಅಂಚಿಕೆ ಮಾಡಲಾಗಿದೆ.
ಈ ಯೋಜನೆಯಡಿಯಲ್ಲಿ ರಾಜ್ಯದ ಪದವೀಧರರು/ಸ್ನಾತಕೋತ್ತರ ಪದವೀಧರರು/ಡಿಪ್ಲೊಮಾ ತೇರ್ಗಡೆಯಾದವರು, ನಿರುದ್ಯೋಗ ಭತ್ಯ ಪಡೆಯಲು ಅರ್ಹರಾಗಿರುತ್ತಾರೆ.
ಪದವೀಧರರಿಗೆ ಮಾಸಿಕ ಮೂರು ಸಾವಿರ, ಡಿಪ್ಲೋಮಾ ತೇರ್ಗಡೆಯಾದವರಿಗೆ 1500 ರೂಪಾಯಿಗಳನ್ನು ನಿರುದ್ಯೋಗ ಭತ್ಯೆಯನ್ನಾಗಿ ಅವರ ಬ್ಯಾಂಕ್ ಖಾತೆಗೆ ನಗದು ವರ್ಗಾವಣೆ ಮಾಡುವ ಮೂಲಕ ನೀಡಲು ತೀರ್ಮಾನಿಸಿದೆ.ಪದವಿ/ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು…
2022-23ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ 23ರಲ್ಲಿ ತೇರ್ಗಡೆ ಹೊಂದಿರಬೇಕು. ಅಭ್ಯರ್ಥಿಗಳು ಕನಿಷ್ಟ 6 ವರ್ಷಗ ಕಾಲ ಕರ್ನಾಟಕದಲ್ಲಿ ರಹವಾಸಿಯಾಗಿ ವ್ಯಂಗ ಮಾಡಿರಬೇಕು ಎಂದು ತಿಳಿಸಿದ್ದಾರೆ