ಬೆಂಗಳೂರು ಬಳೇಪೇಟೆಯಲ್ಲಿ 52ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಪೂಜಾ ಮಹೋತ್ಸವ ಕಾರ್ಯಕ್ರಮ,ಡಿ. 30-31ರಂದು ಬಳೇಪೇಟೆ ವೆಂಕಟೇಶ್, ರಮೇಶ್ ಹಾಗೂ ಬಳೇಪೇಟೆ, ಕೆ. ಆರ್. ಮಾರುಕಟ್ಟೆ ಹಾಗೂ ಯಶವಂತಪುರ ಯಾರ್ಡ್ ವರ್ತಕರ ಸಹಕಾರದೊಂದಿಗೆ ಅದ್ದೂರಿಯಾಗಿ ಪೂಜಾ ಕಾರ್ಯಕ್ರಮ ಜರುಗಲಿದೆ.
ಡಿ.30ರಂದು ಶನಿವಾರ ಬೆಳಗ್ಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ, ಪೂಜಾ ಕಾರ್ಯಕ್ರಮ, ಪ್ರಸಾದ ವಿನಿಯೋಗ ಹಾಗೂ ಸಂಜೆ 6:30ಕ್ಕೆ ಖ್ಯಾತ ಗಾಯಕರಾದ ವಿದ್ವಾನ್ ವಿ. ಆರ್. ಅನಂತಪದ್ಮನಾಭ ಸಂಗಡಿಗರಿಂದ ಭಕ್ತಿ ಗೀತೆಗಳ ಸಂಗೀತ ಕಾರ್ಯಕ್ರಮ.
ಡಿ. 31ರಂದು ಭಾನುವಾರ ಬೆಳಗ್ಗೆ 11ಗಂಟೆಗೆ ಅರ್ಚಕಂ ದಯತಿ ಶ್ರೀ ಕೃಷ್ಣಮೂರ್ತೀರವರ ನೇತೃತ್ವದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವರಿಗೆ ಪಂಚಾಮೃತ ಅಭಿಷೇಕ, ಚಂಡೆ ಸೇವೆ, ಭಜಂತ್ರಿ ಬಿ. ಎಸ್. ರಮೇಶ್ ರವರಿಂದ ನಾದಸ್ವರ, ಮಹಾಮಂಗಳಾರತಿ ನಂತರ ಮಧ್ಯಾಹ್ನ 12ಗಂಟೆಗೆ ಅನ್ನದಾನ ಏರ್ಪಡಿಸಿದೆ, ಸಂಜೆ 6:30ಕ್ಕೆ ಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ವಿದುಷಿ ಡಾ: ಪದ್ಮನಾಗರಾಜು, ವಿದುಷಿ ಕುಮಾರಿ ಅಮೃತರವರಿಂದ ಹಾಡುಗಾರಿಕೆ, ವಿದ್ವಾನ್ ರುದ್ರಾರಾದ್ಯರವರಿಂದ ಪಿಟೀಲು ವಾದನ ಹಾಗೂ ವಿದ್ವಾನ್ ಎಂ. ಕಿಶೋರ್ ರವರಿಂದ ಮೃದಂಗವಾದನದೊಂದಿಗೆ ಸಂಗೀತ ಕಾರ್ಯಕ್ರಮ ಏರ್ಪಡಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭ, 150ಕ್ಕೂ ಹೆಚ್ಚಿನ ಕಾದಂಬರಿ – ಲೇಖನಗಳನ್ನು ರಚಿಸಿರುವ ಖ್ಯಾತ ಸಾಹಿತಿ ಡಾ: ಕೆ.ವಿ.ರಾಜೇಶ್ವರಿ ರವರಿಗೆ `ಶ್ರೀ ಸರಸ್ವತಿ ವಾಣಿ ಶ್ರೇಷ್ಠಪ್ರಶಸ್ತಿ’ಯನ್ನು ಹಾಗೂ ಮೇಟಿಪಾಳ್ಯ ಶತಶೃಂಗ ವಿದ್ಯಾ ಸಂಸ್ಥೆಯಲ್ಲಿರುವ ವಿಶೇಷ ಮಕ್ಕಳಿಗೆ 33 ವರ್ಷಗಳಿಂದ ಸೇವೆ ಸಲ್ಲಿಸುತ್ತಿರವ ಆರ್. ಸುಧಾರವರಿಗೆ `ವಾಗ್ದೇವಿಶ್ರೇಷ್ಠ ಪ್ರಶಸ್ತಿ’ ನೀಡಿ, ಸನ್ಮಾನಿಸಲಾಗುವುದು, ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಬೇಕೆಂದು ಬಳೇಪೇಟೆ ವೆಂಕಟೇಶ್, ರಮೇಶ್ರವರು ಪತ್ರಿಕ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ವರದಿ: ಜಿ.ಎಲ್. ಸಂಪಂಗಿರಾಮುಲು