ಇಂಡಿ: ಯಾವುದೇ ದಾಖಲೆ ಇಲ್ಲದೆ ಲಾರಿಯಲ್ಲಿ ಅಪಾರ ಮೊತ್ತದ ಹಣ ಸಾಗಿಸುತ್ತಿದ್ದನ್ನು ಪತ್ತೆ ಹಚ್ಚಿರುವ ಅಧಿಕಾರಿಗಳು ಹಣವನ್ನು ವಶಪಡಿಸಿಕೊಂಡಿರುವ ಘಟನೆ ಇಂಡಿ ತಾಲೂಕಿನ ಜಳಕಿ ಚೆಕ್ ಪೋಸ್ಟ್‍ನಲ್ಲಿ ನಡೆದಿದೆ.
ಬೆಂಗಳೂರಿನಿಂದ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಹೋಗುತ್ತಿದ್ದ ಲಾರಿಯಲ್ಲಿ ದಾಖಲೆಯಿಲ್ಲದ 54.90ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ.
ಹಣವನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ಈ ಸಂಬಂಧ ಬೆಂಗಳೂರು ಮೂಲದ ಸಯ್ಯದ್, ಜಮೀಲ್, ರಂಗಸ್ವಾಮಿ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಜಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Review