ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ೫೭ನೇ ಸಿಸಿಎಚ್ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು ವಿಡಿಯೋ ಕಾನ್ಫರೆನ್ಸ್ ಮೂಲಕ ೬ ಆರೋಪಿಗಳು ಹಾಜರಾಗಿದ್ದಾರೆ. ಈ ವೇಳೆ ಕೋರ್ಟ್ ನವೆಂಬರ್ ೩ಕ್ಕೆ ದೋಷಾರೋಪ ನಿಗದಿಪಡಿಸಲು ತಿಳಿಸಿತು. ನಾವು ಮಾತನಾಡುತ್ತಿರುವುದು ಕೇಳುತ್ತಿಯಾ ಎಂದು ಜಡ್ಜ್ ಕೇಳಿದಾಗ ಕೇಳಿಸುತ್ತಿದೆ ಎಂದು ದರ್ಶನ್ ಪವಿತ್ರಾಗೌಡ ಉತ್ತರಿಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕವೇ ದೋಷಾರೋಪ ನಿಗದಿಗೆ ಕೋರ್ಟ್ ನಿರ್ಧರಿಸಿತ್ತು. ನಾವು ಆರೋಪಿಗಳಿಗೆ ಯಾವುದೇ ಸೂಚನೆಗಳನ್ನು ನೀಡಲಾಗಿಲ್ಲ ದೋಷಾರೋಪ ಒಪ್ಪಿಕೊಂಡು ಬಿಟ್ಟರೆ ಸಮಸ್ಯೆ ಆಗಲಿದೆ ಎಂದು ದರ್ಶನ್ ಪರ ವಕೀಲ ಸುನೀಲ ವಾದಿಸಿದರು.
ಬಳಿಕ ಜಡ್ಜ್ ಒಬ್ಬೊಬ್ಬರ ಹೆಸರನ್ನೇ ಕರೆದು ಹಾಜರಾತಿ ಖಚಿತಪಡಿಸಿಕೊಳ್ಳುತ್ತಿದ್ದಾರೆ. ಖುದ್ದಾಗಿ ಹಾಜರುಪಡಿಸಲು ದರ್ಶನ್ ಪರ ವಕೀಲ ಸುನಿಲ್ ಮನವಿ ಮಾಡಿದ್ದು, ನಾವು ಆರೋಪಿಗಳಿಗೆ ಯಾವುದೇ ಸೂಚನೆಗಳನ್ನು ನೀಡಿಲ್ಲ. ಇದೆ ಸಂದರ್ಭದಲ್ಲಿ ಮತ್ತೊಂದು ದಿನಾಂಕ ನಿಗದಿಪಡಿಸಲು ವಕೀಲರು ಜಡ್ಜ್ ಗೆ ಮನವಿ ಮಾಡಿದರು.
ಬೇರೆ ದಿನಾಂಕ ನಿಗದಿ ಪಡಿಸುವ ಮುನ್ನ ಎರಡು ವಾರ ಸಮಯ ನೀಡಲು ದರ್ಶನ್ ಪರ ವಕೀಲ ಸುನಿಲ್ ಮನವಿ ಮಾಡಿದರು. ಜೈಲಿಗೆ ತೆರಳಿ ಸೂಚನೆಗಳನ್ನು ನೀಡಲು ವಕೀಲರಿಗೆ ಅವಕಾಶ ನೀಡಿದ ಕೋರ್ಟ್. ಬಳಿಕ ನವೆಂಬರ್ ೩ಕ್ಕೆ ದೋಷಾರೋಪ ನಿಗದಿ ಮಾಡಲಾಗುತ್ತದೆ ಎಂದು ಕೋರ್ಟ್ ತಿಳಿಸಿತು.


 
		 
		 
		
 
		
 
    