ಬೆಂಗಳೂರು: ಪ್ರಶಸ್ತಿ ಪುರಸ್ಕೃತ ಚಿಕಾಗೊ ಮೂಲದ ಕಾರ್ ಕೇರ್ ಕಂಪನಿ ಟಟ್ರ್ಲ್ ವ್ಯಾಕ್ಸ್, ಇಂಕ್. ಭಾರತದಲ್ಲಿ ತನ್ನ ಕಾರ್ಯಾಚರಣೆಗಳ ಐದು ವರ್ಷ ಪೂರ್ಣಗೊಂಡಿರುವುದನ್ನು ಪ್ರಕಟಿಸಿದೆ. ಕಾರು ಉತ್ಸಾಹಿಗಳಿಗೆ ಅವರ ಬದಲಾಗುತ್ತಿರುವ ಅಗತ್ಯಗಳಿಗೆ ಸೂತ್ರಗಳನ್ನು ಒದಗಿಸುತ್ತಿದ್ದು 2019ರ ಈ ದಿನದಂದು ತನ್ನ ಭಾರತದ ಕಾರ್ಯಾಚರಣೆಗೆ ಚಾಲನೆ ನೀಡಿತ್ತು.
ಈ ಸಂದರ್ಭಕ್ಕಾಗಿ ಟಟ್ರ್ಲ್ ವ್ಯಾಕ್ಸ್ ತನ್ನ ಸ್ಮಾರ್ಟ್ ಶೀಲ್ಡ್ ಪೇಂಟ್ ಪ್ರೊಟೆಕ್ಷನ್ ಫಿಲ್ಮ್ ಅನ್ನು ಬಿಡುಗಡೆ ಮಾಡಿದ್ದು ಇದು ಭಾರತದಲ್ಲಿ ತನ್ನ ಕೋ-ಬ್ರಾಂಡೆಡ್ ಕಾರ್ ಕೇರ್ ಸ್ಟುಡಿಯೋಗಳಲ್ಲಿ ವಿಶೇಷವಾಗಿ ಲಭ್ಯವಿದೆ. ಈ ಪಿಪಿಎಫ್ ಕ್ರಾಂತಿಕಾರಕ ಸೆಲ್ಫ್-ಹೀಟಿಂಗ್ ಟಾಪ್ ಕೋಟ್ ನೊಂದಿಗೆ ಬಂದಿದ್ದು ಯುವಿ ಕಿರಣಗಳಿಗೆ ಅಸಾಧಾರಣ ತಾಳಿಕೆ ಮತ್ತು ಒಇಎಂ ಪೇಂಟೆಡ್ ಮೇಲ್ಮೈಗಳ ಉನ್ನತ ರಕ್ಷಣೆ ನೀಡುತ್ತದೆ.
ಇದು ಸರಿಸಾಟಿ ಇರದ ಸ್ಕ್ರಾಚ್ ನಿರೋಧಕತೆ, ಕಲೆಗಳಿಂದ ಮತ್ತು ವಾತಾವರಣದಿಂದ ರಕ್ಷಣೆ ನೀಡುತ್ತಿದ್ದು ಈ ಎಲ್ಲವನ್ನೂ ಹೈ-ಗ್ಲಾಸ್ ಫಿನಿಷ್ ಮತ್ತು ಆಪ್ಟಿಕಲ್ ಕ್ಲಾರಿಟಿಯೊಂದಿಗೆ ನೀಡುತ್ತದೆ. ಈ ಸೇವೆಯು 5 ವರ್ಷಗಳ ವಾರೆಂಟಿ ಮತ್ತು 3 ವರ್ಷಗಳ ವಾರೆಂಟಿಯೊಂದಿಗೆ ಬರುತ್ತದೆ.
ಇದಲ್ಲದೆ ಟಟ್ರ್ಲ್ ವ್ಯಾಕ್ಸ್ ಬೆಂಗಳೂರಿನಲ್ಲಿ ಮೊಟ್ಟಮೊದಲ ಎಕ್ಸ್ ಪೀರಿಯೆನ್ಸ್ ಸೆಂಟರ್ ಅನ್ನೂ ಉದ್ಘಾಟಿಸಿದೆ. ಈ ಕೇಂದ್ರವು 1500 ಚದರ ಅಡಿ ವಿಸ್ತೀರ್ಣ ಹೊಂದಿದ್ದು ಕಾರ್ ಡೀಟೇಲಿಂಗ್ ನಲ್ಲಿ ಆವಿಷ್ಕಾರ ಮತ್ತು ಶ್ರೇಷ್ಠತೆಯನ್ನು ಬಿಂಬಿಸುತ್ತದೆ. ಈ ಕೇಂದ್ರವು ದೇಶದಲ್ಲಿ ಮೊಟ್ಟಮೊದಲನೆಯದಾಗಿದ್ದು ಪ್ರಸ್ತುತದ ಡೀಲರ್ ಗಳಿಗೆ ಸುಲಭವಾಗಿ ಕಲಿಯಬಲ್ಲ ವಾತಾವರಣದಲ್ಲಿ ಸುಧಾರಿತ ಡೀಟೇಲಿಂಗ್ ಕೌಶಲ್ಯಗಳ ಮೂಲಭೂತ ಅಂಶಗಳಿಗೆ ಮುನ್ನುಗ್ಗಲು ಉತ್ತೇಜಿಸುತ್ತದೆ ಮತ್ತು ಟಟ್ರ್ಲ್ ವ್ಯಾಕ್ಸ್ ಪ್ರಯಾಣದ ಆಳವಾದ ಅಲ್ಲದೆ ಅದರ ಉತ್ಪನ್ನಗಳು ಮತ್ತು ಸಿದ್ಧಾಂತ ಅರ್ಥೈಸಿಕೊಳ್ಳುವಿಕೆಗೆ ನೆರವಾಗುತ್ತದೆ.
ಈ ಸಂದರ್ಭ ಕುರಿತು ಟಟ್ರ್ಲ್ ವ್ಯಾಕ್ಸ್ ಕಾರ್ ಕೇರ್ ಇಂಡಿಯಾ ಪ್ರೈ.ಲಿ.ಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸಜನ್ ಪುರವಂಗರ, “ಭಾರತದಲ್ಲಿ ಟಟ್ರ್ಲ್ ವ್ಯಾಕ್ಸ್ ಗೆ ಐದನೇ ವಾರ್ಷಿಕೋತ್ಸವವಾಗಿದ್ದು ಅದು ಭಾರತದ ವೃದ್ಧಿಸುತ್ತಿರುವ ಕಾರ್ ಕೇರ್ ಸಂಸ್ಕೃತಿಯಲ್ಲಿ ನಮ್ಮ ಸಾಮಥ್ರ್ಯ ಮತ್ತು ಬ್ರಾಂಡ್ ವ್ಯಾಪ್ತಿ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ.
ಈ ಕಳೆದ 5 ವರ್ಷಗಳಲ್ಲಿ ಈಪ್ರಯಾಣವನ್ನು ಹಿಂದಿರುಗಿ ನೋಡುವುದು ಹಾಗೂ ವಾಹನ ಉತ್ಸಾಹಿಗಳು ಮತ್ತು ಕಾರು ಮಾಲೀಕರ ಹೃದಯಗಳನ್ನು ಸೆಳೆದ ಅಸಾಧಾರಣ ಕಥೆಗಳನ್ನು ಸ್ಮರಿಸುವುದು ನಿಜಕ್ಕೂ ಸಂತೋಷ ತಂದಿದೆ. ಹಲವು ಚಾನೆಲ್ ಗಳಲ್ಲಿ ಪ್ರಗತಿಯು ಅಸಾಧಾರಣವಾಗಿದೆ ಮತ್ತು ನಾವು ಪ್ರತಿ ವರ್ಷ ಟೈಯರ್ 1 ಮಾತ್ರವಲ್ಲದೆ ಟೈಯರ್ 2 ಹಾಗೂ ಟೈಯರ್ 3 ನಗರಗಳಿಗೂ ಆದ್ಯತೆ ನೀಡಿದ್ದೇವೆ. ಈ ಸಂದರ್ಭದಲ್ಲಿ ನಾವು ನಮ್ಮ ಚಾನೆಲ್ ಪಾಲುದಾರರು, ಗ್ರಾಹಕರು, ಉದ್ಯಮ ಪಾಲುದಾರರು ಮತ್ತು ನಮ್ಮ ಬ್ರಾಂಡ್ ಶ್ರೇಷ್ಠತೆಯಲ್ಲಿ ನಂಬಿಕೆ ಇರಿಸಿದ ಪ್ರತಿ ವ್ಯಕ್ತಿಗೂ ಕೃತಜ್ಞತೆ ಸಲ್ಲಿಸುತ್ತೇವೆ” ಎಂದರು.