ಬೆಂಗಳೂರು: ಕೋಣನಕುಂಟೆ ಪೊಲೀಸರು ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುತ್ತಾರೆ.ಈತನಿಂದ 16,50,000 ಬೆಲೆ ಬಾಳುವ 235 ಗ್ರಾಂ ಚಿನ್ನ ಬಣ್ಣ ವಶಪಡಿಸಿಕೊಂಡಿರುತ್ತಾರೆ. ಈ ಆರೋಪಿಯು ಬಸ್ಸಿನಲ್ಲಿ, ಮನೆಗಳವು, ಹಾಗೂ ಇತರೆ ಸ್ಥಳಗಳಲ್ಲಿ ಚಿನ್ನದ ಸರಗಳನ್ನು ಕಳ್ಳತನ ಮಾಡುತ್ತಿದ್ದ. ಈತನ ಬಂಧನದಿಂದ ಒಟ್ಟು 12 ಪ್ರಕರಣಗಳು ಪತ್ತೆಯಾಗಿರುತ್ತದೆ.
ಇದರಿಂದ ಬನಶಂಕರಿ ಕುಮಾರಸ್ವಾಮಿ ಲೇಔಟ್, ಹುಳಿಮಾವು ಕೋಣನಕುಂಟೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಪ್ರಕರಣಗಳು ಪತ್ತೆಯಾಗಿರುತ್ತದೆ.ಕುಮಾರಸ್ವಾಮಿ ಲೇಔಟ್ ಪೊಲೀಸ್ ಸರು ನಾಲ್ವರನ್ನು ಬಂಧಿಸಿ ಸುಮಾರು 11 ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣ ವಶಪಡಿಸಿಕೊಂಡಿರುತ್ತಾರೆ.
ಚಿನ್ನದ ಚೈನ್ ಮತ್ತು ಮಾಂಗಲ್ಯ ಸರಗಳನ್ನು ಕಳ್ಳತನ ಮಾಡಿ ವಿಲಾಸಿ ಜೀವನ ನಡೆಸುತ್ತಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ಆಯುಕ್ತರು ತಿಳಿಸಿದರು. ಆರು ಕಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತದೆ, 11 ಲಕ್ಷ ಮೌಲ್ಯದ 174 g ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ಆರೋಪಿಗಳು ಶುಕ್ರವಾರದಂದು ಬನಶಂಕರಿ ದೇವಸ್ಥಾನಕ್ಕೆ ಪೂಜೆಗೆ ಎಂದು ಬರುತ್ತಿದ್ದ ಮಹಿಳೆಯರ ಕತ್ತಿನಲ್ಲಿದ್ದ ಸರಗಳನ್ನು, ನೂಕು ನುಗ್ಗಲು ಜಾಸ್ತಿಯಾಗಿತ್ತುದ್ದನ್ನು ಗಮನಿಸಿ ಮಹಿಳೆಯರ ಕುತ್ತಿಗೆಯಿಂದ ಸ್ವರಗಳನ್ನು ಅಪಹರಿಸುತ್ತಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.