ಪೀಣ್ಯ ದಾಸರಹಳ್ಳಿ: ಬೆಂಗಳೂರಿನ ಪೀಣ್ಯ ಎರಡನೇ ಹಂತದ ಅಂಬೇಡ್ಕರ್ ಸರ್ಕಲ್ ನಲ್ಲಿ ವಿಶ್ವ ಚೇತನ ಬುದ್ದ ಎಜುಕೇಷನಲ್ ಮತ್ತು ಚಾರೀಟೇಬಲ್ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ 67 ನೇ ವರ್ಷದ ಡಾ. ಬಿ ಅರ್ ಅಂಬೇಡ್ಕರ್ ರವರ ಮಹಾಪರಿ ನಿರ್ವಾಣ ಸಮಾರಂಭವನ್ನು ಆಯೋಜಿಸಲಾಗಿತ್ತು.
ಅಂಬೇಡ್ಕರ್ ರವರ ಪುತ್ತಳಿ ಗಣ್ಯರು, ಕಲಾವಿದರು, ನೂರಾರು ಸಂಖ್ಯೆಯಲ್ಲಿ ನಾಗರೀಕರು ಟ್ರಸ್ಟ್ ನ ಪಧಾದಿಕಾರಿಗಳು ಪುಷ್ಪರ್ಚಾನೆ ಮಾಡಿ ನಮನ ಸಲ್ಲಿಸಿದರು.ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಚಕ್ಕರೆ ಲೋಕೇಶ್ ಮತ್ತು ತಂಡ ಸಬ್ಬನಹಳ್ಳಿ ರಾಜು ಮತ್ತು ತಂಡ. ಶಂಕರ್ ಭಾರತಿಪುರ ,ತಂಡ ಮರಿದೇವರು ಮತ್ತು ತಂಡ, ಗುಲ್ಬರ್ಗದ ಬೀರಪ್ಪ ಸಲಗಾರ ,ಎವಿ ವೆಂಕಟೇಶ್, ಉಸ್ಮಾನ್ ಭಾನು ತಂಡ ದವರಿಂದ ಜಾನಪದ ಗೀತ ಗಾಯನದಲ್ಲಿ ಅಂಬೇಡ್ಕರ್ ರವರಿಗೆ ನಮನ ಸಲ್ಲಿಸಿದರು.
ವೀರಗಾಸೆ,ಡೊಳ್ಳುಕುಣಿತ ಪೂಜಾ ಕುಣಿತ, ತಮಟೆ ವಾದ್ಯ, ಚಿಪಿಪಿಲಿ ಗೊಂಬೆ, ಕೋಳಿ ಕುಣಿತ ಹಾಗೂ ಇತರೆ ಜಾನಪದ ಕಲಾತಂಡಗಳಿಂದ ಪ್ರದರ್ಶನ ಮೆರಗು ನೀಡಿತು.ವೇದಿಕೆಯಲ್ಲಿ ಸಮಾಜ ಸೇವಕರಾದ ಬಿ ನಟರಾಜ್ ಕುಮಾರ್ ರವರ ತಾಯಿ ಹಿರಿಯನಾಗರೀಕರಾದ ಶ್ರೀಮತಿ ಗಂಗಮ್ಮ ರವರನ್ನು ಸನ್ಮಾನಿಸಲಾಯಿತು.
ಪಕ್ಷ ಬೇದ ಮರೆತು ಬಿಜೆಪಿ, ಕಾಂಗ್ರೆಸ್ ಜೆಡಿಎಸ್ , ಪಕ್ಷದ ರಾಜಕೀಯ ಮುಖಂಡರು ಭಾಗವಹಿಸಿದ್ದ ಪ್ರಮುಖ ಮುಖಂಡರಾದ ಮಾಜಿ ನಗರಸಭಾ ಸದಸ್ಯ ಎಂ ಶಿವಣ್ಣ ಶೇಂಗಾ ನಾಡು ಹಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ತಿಮ್ಮರಾಜುಗೌಡರು ರಾಜಗೋಪಾಲ್ ನಗರ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಕುಮಾರ್ ಲಗ್ಗೆರೆ ನಾರಾಯಣಸ್ವಾಮಿ ಇನ್ನು ಹಲವಾರು ಮುಖಂಡರು ಪುಣ್ಯ ಸ್ಮರಣೆಯಲ್ಲಿ ಭಾಗವಹಿಸಿದ್ದರು.
ಅಂಬೇಡ್ಕರ್ ರವರ ಪುಣ್ಯ ಸ್ಮರಣೆಯನ್ನು ಸಾರ್ವಜನಿಕವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.ಟ್ರಸ್ಟ್ ನ ಅಧ್ಯಕ್ಷರಾದ ಜಿ ಅಂಜನಪ್ಪ ನವರು ಸಮಾರಂಭಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು.ಪಧಾದಿಕಾರಿಗಳಾದ ಕೆಂಪರಾಜು, ಕೃಷ್ಣಯ್ಯ, ಶೀಲಾ, ಸುವರ್ಣ, ಪುಟ್ಟತಾಯಮ್ಮ, ಗಂಗನರಸಯ್ಯ, ಸುನೀಲ್ ಕುಮಾರ್, ಸತೀಶ್, ನೀಲರಾಜು, ಜಿ ರಾಜು, ಎಂ ವಿಜಯ್, ಇತರರು ಭಾಗವಹಿಸಿದ್ದರು, ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.