ತಿಪಟೂರು: ತಾಲ್ಲೂಕು, ಕೆರೆಗೋಡಿ-ರಂಗಾಪುರ,ಸುಕ್ಷೇತ್ರಾಧ್ಯಕ್ಷರಾದ ಪರಮಪೂಜ್ಯ ಶ್ರೀಶ್ರೀಶ್ರೀಏಳನೆಯ ಗುರುಪರದೇಶಿಕೇಂದ್ರ ಮಹಾ ಸ್ವಾಮೀಜಿಯವರ ?ಜನ್ಮವರ್ಧಂತಿ” ಮಹೋತ್ಸವವನ್ನು ದಿನಾಂಕ: 05-04-2024ನೇ ಶುಕ್ರವಾರ ಬೆಳಗ್ಗೆ 11:30ಕ್ಕೆ ಸುಕ್ಷೇತ್ರದಲ್ಲಿ ಆಚರಿಸಲಾಗುವುದು ಎಂದು ಹಿರಿಯ ವಿದ್ಯಾರ್ಥಿ ಹಾಗೂ ಶ್ರೀ ಕ್ಷೇತ್ರ ಅಭಿಮಾನಿ ಸಂಘದ ಅಧ್ಯಕ್ಷ ಶಿವಪ್ಪ ತಿಳಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೆರಗೂಡಿ ರಂಗಾಪುರ ಸುಕ್ಷೇತ್ರ ನೂರಾರು ವರ್ಷಗಳಿಂದ ಸೇವೆ ಸಿಲಿಸುತ್ತ ಬಂದಿದ್ದು 05.04 2024ರ ಶುಕ್ರವಾರ ಬೆಳಗ್ಗೆ 5:00 ಗಂಟೆಗೆಕ್ಷೇತ್ರಾಧಿದೈವನಾದ ಶ್ರೀ ಶಂಕರೇಶ್ವರಸ್ವಾಮಿಗೆ ವೈದಿಕ ರಾಜೋಪಚಾರವನ್ನು ಹಾಗೂ 10.30ಕ್ಕೆ ಪೂಜ್ಯ ಶ್ರೀಗಳವರ ಪಾದಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಗುವುದು.
ಈ ಮಹೋತ್ಸವದಲ್ಲಿ ಗೋಡೆಕೆರೆ ಶ್ರೀಮಠದ ಚರಪಟ್ಟಾಧ್ಯಕ್ಷರಾದ ಪರಮಪೂಜ್ಯ ಶ್ರೀಶ್ರೀಶ್ರೀ ಮೃತ್ಯುಂಜಯದೇಶಿಕೇಂದ್ರ ಮಹಾಸ್ವಾಮಿಜಿಯವರು ಹಾಗೂ ಮಾಡಾಳು ನಿರಂಜನ ಪೀಠಾಧ್ಯಕ್ಷರಾದ ಶ್ರೀಶ್ರೀಶ್ರೀ ರುದ್ರಮುನಿ ಮಹಾಸ್ವಾಮೀಜಿಯವರು, ಸುಕ್ಷೇತ್ರದ ಹಿರಿಯ ವಿದ್ಯಾರ್ಥಿಗಳು ಕ್ಷೇತಾಭಿಮಾನಿಗಳು ಹಾಗೂ ನಾಡಿನ ಸಮಸ್ತ ಭಕ್ತ ಬಂಧುಗಳು ಪಾಲ್ಗೊಳ್ಳುವರು.
ಈ ವೇಳೆ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಆಡಳಿತ ಅಧಿಕಾರಿ ಲೋಕೇಶ್, ಉಪಾಧ್ಯಕ್ಷ ಬಸವರಾಜು, ನಿವೃತ್ತ ಶಿಕ್ಷಕ ಗಂಗಣ್ಣ, ಮುಂತಾದವರು ಹಾಜರಿದ್ದರು.