ಬೆಂಗಳೂರು: ಬೆಂಗಳೂರಿನ ನಗರ ಸಿಸಿಬಿ ಪೊಲೀಸರು 6 ಮಂದಿ ಬೆಂಗಳೂರು ಮತ್ತು ಕೇರಳ ಮೂಲದ ಸೈಬರ್ ವಂಚಕರನ್ನು ಬಂಧಿಸುವಲ್ಲಿ ಯಶ್ವಿಸಿಯಾಗಿದ್ದಾರೆ.
ಬಂಧಿತರಿಂದ ಸುಮಾರು 75 ಸೈಬರ್ ವಂಚನೆ ಪ್ರಕರಣಗಳು ಪತ್ತೆಯಾಗಿವೆ. ಸಮೀರ್, ಮೊಹಮ್ಮದ್ ಹಸನ್, ಮಹಮ್ಮದ್ ಇರ್ಫಾನ್, ಅಮೂಲ್ ಬಾಬು, ತಂಝಿಲ್, ಮಂಜುನಾಥ್ ಎಂಬುವರೇ ಬಂಧಿತ ಆರೋಪಿಗಳು.
ಬಂಧಿತರು ವ್ಯಕ್ತಿಗಳು ಗುರುತಿನ ದಾಖಲಾತಿಗಳನ್ನು ಪಡೆದು ಅವರ ಹೆಸರಿನಲ್ಲಿ ಬೇರೆ ಬೇರೆ ಬ್ಯಾಂಕ್ಗಳಲ್ಲಿ ಬೇನಾಮಿ ಹೆಸರಿನಲ್ಲಿ ಅಕೌಂಟ್ ಓಪನ್ ಮಾಡಿ ವಂಚಿಸುತ್ತಿದ್ದರು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯುಕ್ತರು ಆನ್ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಅಮಾಯಕ ಜನರಿಗೆ ವಂಚಿಸಿ ಸಂಗ್ರಹಿಸಿ ದಾನವನ್ನು ಈ ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡಿ ಕೊಂಡು ಅದನ್ನು ನಗದು ರೂಪಕ್ಕೆ ಪರಿವರ್ತಿಸಿ , ವಂಚಕರಿಗೆ ತಲುಪಿಸುತ್ತಿರುವುದು ಕಂಡುಬಂದಿರುತ್ತದೆ. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್, ಡಿಸಿಪಿ ಆಹಾದ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಅವರು ಹಾಜರಿದ್ದರು.