ನಳಂದಾ: ಬಿಹಾರದ ನಳಂದಾ ಜಿಲ್ಲೆಯ ಬಿಹಾರಶರೀಫ್ ಸಮೀಪದ ಮಘಡಾ ಗ್ರಾಮದಲ್ಲಿರುವ ಪುರಾತನ ಶೀತಲಾ ಮಾತಾ ದೇಗುಲದಲ್ಲಿ ಇಂದು ಭೀಕರ ಕಾಲ್ತುಳಿತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 8 ಭಕ್ತರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ಶೀತಲಾಷ್ಟಮಿ (ಚೈತ್ರ ಕೃಷ್ಣ ಅಷ್ಟಮಿ) ಅಂಗವಾಗಿ ದೇಗುಲದಲ್ಲಿ ವಿಶೇಷ ಮೇಳ ಆಯೋಜಿಸಲಾಗಿತ್ತು. ಈ ದಿನದಂದು ದೇವಿಗೆ ತಣ್ಣನೆಯ ಆಹಾರವನ್ನು ನೈವೇದ್ಯವಾಗಿ ಅರ್ಪಿಸುವ ಸಂಪ್ರದಾಯವಿರುವುದರಿAದ ಬೆಳಗಿನ ಜಾವದಿಂದಲೇ ಸಾವಿರಾರು ಭಕ್ತರು ಸರದಿಯಲ್ಲಿ ನಿಂತಿದ್ದರು. ಜನಸಂದಣಿ ಮಿತಿಮೀರಿದ ಕಾರಣ ಇದ್ದಕ್ಕಿದ್ದಂತೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.



