ಹೈದರಾಬಾದ್: ಟೆಕ್ಸಾಸ್ ಮಾಲ್‍ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹೈದರಾಬಾದ್‍ನ 27 ವರ್ಷದ ಐಶ್ವರ್ಯಾ ಮತ್ತು ಇತರ ಎಂಟು ಜನರು ಸಾವನ್ನಪ್ಪಿದ್ದಾರೆ.
ಮೃತ ಐಶ್ವರ್ಯಾ ಅವರು ಪ್ರಸ್ತುತ ರಂಗಾ ರೆಡ್ಡಿ ಜಿಲ್ಲಾ ವಾಣಿಜ್ಯ ನ್ಯಾಯಾಲಯಗಳ ಸಂಕೀರ್ಣದಲ್ಲಿ ಕೆಲಸ ಮಾಡುತ್ತಿರುವ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ತಾತಿಕೊಂಡ ನರಸಿರೆಡ್ಡಿ ಅವರ ಪುತ್ರಿ ಯಾಗಿದ್ದು.
ಟೆಕ್ಸಾಸ್‍ನ ಅಲೆನ್ ಪ್ರೀಮಿಯಂ ಔಟ್ಲೆಟ್ಸ್ ಮಾಲ್‍ನಲ್ಲಿ ಐಶ್ವರ್ಯಾ ತನ್ನ ಸ್ನೇಹಿತರೊಂದಿಗೆ ಶಾಪಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಗುಂಡಿನ ದಾಳಿಯಲ್ಲಿ, ಬಂದೂಕುಧಾರಿ ಜನನಿಬಿಡ ಮಾಲ್ನಲ್ಲಿ ಗುಂಡು ಹಾರಿಸಿದ್ದು, ಪೊಲೀಸ್ ಅಧಿಕಾರಿಯಿಂದ ಗುಂಡಿಕ್ಕಿ ಕೊಲ್ಲುವ ಮೊದಲು ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
Leave a Review