This is the title of the web page
This is the title of the web page

ವಿಧಾನಸಭಾ ಚುನಾವಣೆ, ತಾಲ್ಲೂಕಿನಲ್ಲಿ ಶೇ. 90.95 ದಾಖಲೆ ಮತದಾನ

ಹೊಸಕೋಟೆ: ವಿಧಾನಸಭಾ ಚುನಾವಣೆಯಲ್ಲಿ ತಾಲೂಕಿನ 293 ಮತಕೇಂದ್ರಗಳಲ್ಲಿ ಒಟ್ಟು ಶೇ. 90.95ರಷ್ಟು ದಾಖಲೆಯ ಮತದಾನ ನಡೆದಿದೆ. ಒಟ್ಟು 2,34,079ರಲ್ಲಿ 2,12,890 ಮತದಾರರು ಮತ ಚಲಾಯಿಸಿದ್ದಾರೆ. ಇವರಲ್ಲಿ 1,16,252 ಪುರುಷರಲ್ಲಿ 1,05,973 (ಶೇ. 91.6), 1,17,805 ಮಹಿಳೆಯರಲ್ಲಿ 1,06,909 (ಶೇ. 90.75) ಮತ ಚಲಾಯಿಸಿದ್ದಾರೆ.

ಅತಿ ಹೆಚ್ಚಿನ ಮತದಾನ ದೊಡ್ಡನಲ್ಲೂರಹಳ್ಳಿಯ 106ನೇ ಮತಕೇಂದ್ರದಲ್ಲಿ ಶೇ. 98.98 ನಡೆದಿದ್ದು ದೊಡ್ಡತಗ್ಗಲಿಯಲ್ಲಿ 98.92, ಅನುಪಹಳ್ಳಿ ಶೇ, 97.83, ಬೆಂಡಿಗಾನಹಳ್ಳಿ ಶೇ. 93.72, ದಿನ್ನೆಕೊರಟಿ ಶೇ. 98.37, ದೊಡ್ಡಕೋಲಿಗ ಶೇ. 98.03, ಮಲಿಯಪ್ಪನಹಳ್ಳಿ ಶೇ. 98.59, ಅಟ್ಟೂರು ಶೇ. 96.36, ಮೈಲಾಪುರ ಶೇ. 98.42, ತವಟಹಳ್ಳಿ ಶೇ. 98.81, ಕೊಂಡ್ರಹಳ್ಳಿ 97.92, ಉಪ್ಪಾರಹಳ್ಳಿ ಶೇ. 97.34, ಛತ್ರಿಪಾಳ್ಯ ಶೇ. 97.15, ಕಾಚರಕನಹಳ್ಳಿ ಶೇ.96.95, ಬೆಳ್ಳಿಕೆರೆ ಶೇ. 97.20, ಗುಂಡೂರು ಶೇ. 98.84 ಮತದಾನ ದಾಖಲಾಗಿದೆ. ಅತಿ ಕಡಿಮೆ ಮತದಾನ ನಂದಗುಡಿಯ ಮತಕೇಂದ್ರ 30ರಲ್ಲಿ ಶೇ. 81.65ರಷ್ಟಾಗಿದೆ. 100ಕ್ಕೂ ಹೆಚ್ಚು ಮತಕೇಂದ್ರಗಳಲ್ಲ ಶೇ.95ಕ್ಕಿಂತಲೂ ಹೆಚ್ಚಿನ ಮತದಾನವಾಗಿದೆ.

ನಗರದ ಒಟ್ಟು 48 ಮತಕೇಂದ್ರಗಳಲ್ಲಿ ಒಟ್ಟು 51838ರಲ್ಲಿ 40978 (ಶೇ.79.05) ಮತದಾನವಾಗಿದೆ. 25740 ಪುರುಷರಲ್ಲಿ 20197 (ಶೇ. 78.47), 26081 ಮಹಿಳೆಯರಲ್ಲಿ 20777 (ಶೇ. 79.66) ಮತ ಚಲಾವಣೆಯಾಗಿದೆ. ಸಿದ್ದಾರ್ಥನಗರದಲ್ಲಿ ಶೇ. 98.98ರಷ್ಟು ಹೆಚ್ಚು ಮತದಾನವಾಗಿದ್ದು ಅತಿ ಕಡಿಮೆ ಶೇ. 63.75 ಮತಕೇಂದ್ರ 154ರಲ್ಲಿ ನಡೆದಿದೆ.