ಚಾಮರಾಜನಗರ: ಕರ್ನಾಟಕ ವಿಧಾನಪರಿಷತ್ತಿನ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾನ ನಡೆದಿದ್ದು, ಚಾಮರಾಜನಗರ ಜಿಲ್ಲೆಗೆ ಸಂಬಂಧಿಸಿದಂತೆ ಶೇ. 92ರಷ್ಟು ಮತದಾನವಾಗಿದೆ.ತಾಲೂಕುವಾರು ಮತದಾನದ ವಿವರ : ಗುಂಡ್ಲುಪೇಟೆ ಶೇ. 93 ರಷ್ಟು, ಚಾಮರಾಜನಗರ ಶೇ. 94, ಯಳಂದೂರು ಶೇ. 90, ಕೊಳ್ಳೇಗಾಲ ಶೇ. 91 ಹಾಗೂ ಹನೂರು ತಾಲೂಕಿನಲ್ಲಿ ಶೇ. 91ರಷ್ಟು ಮತದಾನವಾಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆ ಶೇ. 92ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ ತಾಲೂಕಿನಲ್ಲಿ 306 ಪುರುಷರು, 97 ಮಹಿಳೆಯರು ಸೇರಿದಂತೆ ಒಟ್ಟು 403 ಮತದಾರರು, ಚಾಮರಾಜನಗರ 384 ಪುರುಷರು, 219 ಮಹಿಳೆಯರು ಸೇರಿದಂತೆ ಒಟ್ಟು 603 ಮತದಾರರು, ಯಳಂದೂರು 148 ಪುರುಷರು, 54 ಮಹಿಳೆಯರು ಸೇರಿದಂತೆ ಒಟ್ಟು 202 ಮತದಾರರು, ಕೊಳ್ಳೇಗಾಲ 417 ಪುರುಷರು, 307 ಮಹಿಳೆಯರು ಸೇರಿದಂತೆ ಒಟ್ಟು 724 ಮತದಾರರು ಹಾಗೂ ಹನೂರು ತಾಲೂಕಿನಲ್ಲಿ 193 ಪುರುಷರು, 56 ಮಹಿಳೆಯರು ಸೇರಿದಂತೆ ಒಟ್ಟು 249 ಮತದಾರರಿದ್ದು, ಜಿಲ್ಲೆಯಲ್ಲಿ ಒಟ್ಟು 1448 ಪುರುಷರು, 733 ಮಹಿಳೆಯರು ಸೇರಿದಂತೆ 2181 ಮತದಾರರಿದ್ದಾರೆ.
ಈ ಪೈಕಿ ಗುಂಡ್ಲುಪೇಟೆ ತಾಲೂಕಿನಲ್ಲಿ 290 ಪುರುಷರು, 86 ಮಹಿಳೆಯರು ಸೇರಿದಂತೆ ಒಟ್ಟು 376 ಮತದಾರರು, ಚಾಮರಾಜನಗರ 367 ಪುರುಷರು, 201 ಮಹಿಳೆಯರು ಸೇರಿದಂತೆ ಒಟ್ಟು 568 ಮತದಾರರು, ಯಳಂದೂರು 134 ಪುರುಷರು, 48 ಮಹಿಳೆಯರು ಸೇರಿದಂತೆ ಒಟ್ಟು 182 ಮತದಾರರು, ಕೊಳ್ಳೇಗಾಲ 379 ಪುರುಷರು, 280 ಮಹಿಳೆಯರು ಸೇರಿದಂತೆ ಒಟ್ಟು 659 ಮತದಾರರು ಹಾಗೂ ಹನೂರು ತಾಲೂಕಿನಲ್ಲಿ 177 ಪುರುಷರು, 50 ಮಹಿಳೆಯರು ಸೇರಿದಂತೆ ಒಟ್ಟು 227 ಮತದಾರರು ಮತ ಚಲಾಯಿಸಿದ್ದು, ಜಿಲ್ಲೆಯಲ್ಲಿ ಒಟ್ಟು 1347 ಪುರುಷರು, 665 ಮಹಿಳೆಯರು ಸೇರಿದಂತೆ 2012 ಮಂದಿ ಮತ ಚಲಾಯಿಸಿದ್ದಾರೆ.