ದೊಡ್ಡಬಳ್ಳಾಪುರ: ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಗೆ ಕಳ್ಳಿ ಹಾಲು ಕುಡಿಸಿ ಕೊಲೆ ಯತ್ನ ಮಾಡಲಾಗಿದ್ದು,ವಸತಿ ಶಾಲಾ ಸಿಬ್ಬಂದಿಯ ವೈಫಲ್ಯವೇ ಘಟನೆಗೆ ಕಾರಣವಾಗಿದ್ದು, ಘಟನೆಯನ್ನ ಮುಚ್ಟಿಟ್ಟು ವಿದ್ಯಾರ್ಥಿಯ ಜೀವಕ್ಕೆ ಕುತ್ತು ತಂದಿದ್ದ ವಸತಿ ಶಾಲೆಯ ಪ್ರಾಂಶುಪಾಲರು, ವಾರ್ಡನ್ ಮತ್ತು ಆರೋಗ್ಯ ಸಹಾಯಕಿಯ ವಿರುದ್ಧ ಕೊಲೆ ಯತ್ನ ಆರೋಪದ ಮೇಲೆ ದೂರು ನೀಡಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಿ ಘಟನೆ ನಡೆದಿದ್ದು,9ನೇ ತರಗತಿ ವಿದ್ಯಾರ್ಥಿ ನಾಗಾರ್ಜುನ ಕಳ್ಳಿ ಹಾಲು ಸೇವನೆ ಯಿಂದ ತೀರ್ವ ಅಸ್ವಸ್ಥಗೊಂಡು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ, ಸದ್ಯ ಬಾಲಕನನ್ನು ಅಬ್ಸರ್ವೇಷನ್ನಲ್ಲಿ ಇಡಲಾಗಿದ್ದು,ಗಂಟಲು, ರಕ್ತ, ಶ್ವಾಸಕೋಶ ಹಾಗೂ ಸಣ್ಣ ಕರುಳಿನಲ್ಲಿ ನಂಜು ಹರಡಿದ್ದು ಬಾಲಕನ ಸ್ಥಿತಿ ಗಂಭೀರವಾಗಿದೆ.
ಅಸ್ವಸ್ಥಗೊಂಡಿರುವ ಬಾಲಕ ನಾಗಾರ್ಜುನ ಸಾಮಾಜಿಕ ಹೋರಾಟಗಾರರಾದ ಬಿಆರ್. ಭಾಸ್ಕರ್ ಪ್ರಸಾದ್ ಯವರ ತಂಗಿಯ ಮಗ ನಾಗಿದ್ದು,ಆತನ ತಂದೆ ತಾಯಿ ಅಪಘಾತದಲ್ಲಿ ತೀರಿಕೊಂಡಿದ್ದು,ಭಾಸ್ಕರ್ ಪ್ರಸಾದವರು ನಾಗಾರ್ಜುನನ್ನು ನೋಡಿಕೊಳ್ಳುತ್ತಿದ್ದರು. ಕಳೆದ ವರ್ಷ ದೊಡ್ಡಬಳ್ಳಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸೇರಿಸಿದ್ದರು,
ನಾಲ್ಕು ದಿನಗಳ ಹಿಂದೆ ವಸತಿ ಶಾಲೆಯಿಂದ ಭಾಸ್ಕರ್ ಪ್ರಸಾದ್ ರವರಿಗೆ ಪೆÇನ್ ಕರೆ ಬಂದಿದ್ದು, ನಾಗಾರ್ಜುನನಿಗೆ ಜ್ವರ ಮತ್ತು ಗಂಟಲು ನೋವು ಇದ್ದು ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದರು, ಅಸ್ವಸ್ಥಗೊಂಡಿದ್ದ ಬಾಲಕನನ್ನು ಮನೆಗೆ ಕರೆ ತಂದಿದ್ದು ಮನೆಯಲ್ಲೇ ಚಿಕಿತ್ಸೆ ನೀಡಿದ್ದಾರೆ, ಆದರೆ ಬಾಲಕನ ಸ್ಥಿತಿ ತೀರ್ವ ಗಂಭೀರವಾಗಿದ್ದು ತಕ್ಷಣವೇ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಪರೀಕ್ಷೆ ನಡೆಸಿದ ವೈದ್ಯರು ವಿಷ ಸೇವನೆಯಿಂದ ಬಾಲಕನ ಆರೋಗ್ಯ ಹದಗೆಟ್ಟಿದೆ ಎಂದು ಹೇಳಿದ್ದಾರೆ, ಭಾಸ್ಕರ್ ಪ್ರಸಾದ್ ನಾಗಾರ್ಜುನನ್ನು ಕೇಳಿದ್ದಾಗಸ್ನೇಹಿತರು ಕಳ್ಳಿ ಹಾಲು ಮತ್ತು ವಿಷದ ಅಂಟು ದ್ರವವನ್ನು ಬಲವಂತ ಮಾಡಿ ಕುಡಿಸಿದ್ದಾರೆಂದು ಹೇಳಿದ್ದಾನೆ, ಹಾಸ್ಟೇಲ್ ನ ಪುಂಡ ಹುಡುಗರು ನಾಗಾರಾಜುನಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು, ಖಾಸಗಿ ಭಾಗವನ್ನು ಆತನ ಬಾಯಿಗೆ ಇಟ್ಟು ಕಿರುಕುಳ ನೀಡುತ್ತಿದ್ದರಂತೆ.
ವಸತಿ ಶಾಲೆಯ ವೈಫಲವ್ಯೇ ಇಂತಹ ಘಟನೆಗೆ ಕಾರಣವಾಗಿದ್ದು ಮತ್ತು ನಡೆದಘಟನೆಯನ್ನ ಮುಚ್ಟಿಟ್ಟ ವಸತಿ ಶಾಲೆಯ ಪ್ರಾಂಶುಪಾಲರು, ವಾರ್ಡನ್ ಹಾಗೂಆರೋಗ್ಯ ಸಹಾಯಕಿಯ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ದೂರಿನಲ್ಲಿ ಕಳ್ಳಿ ಹಾಲು ಕುಡಿಸಿ ಬಾಲಕನ ಕೊಲೆಗೆಯತ್ನ ಆರೋಪವನ್ನು ದೂರುದಾರ ಭಾಸ್ಕರ್ ಪ್ರಸಾದ್ ರವರು ಮಾಡಿದ್ದಾರೆ.