ಬೆಂಗಳೂರು : ಈಗಾಗಲೇ ಲೋಕಸಭೆ ಟಿಕೆಟ್ ತಮ್ಮ ಮಗನಿಗೆ ಸಿಗದ ಪರಿಣಾಮ ಸ್ವತಂತ್ರವಾಗಿ ಸ್ಪರ್ಧಿಸಲು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ನಿರ್ಧರಿಸಿರುವ ಬೆನ್ನಲ್ಲೇ ತಮ್ಮ ಮುಂದಿನ ನಿಲುವು ಏನು ಎಂಬುದನ್ನು ಮತ್ತೋರ್ವ ಟಿಕೆಟ್ ವಂಚಿತ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ಸಂಸದ ಡಿವಿ ಸದಾನಂದ ಗೌಡ ಅವರು ಕೂಡ ಶುಭ ಪಕ್ಷದ ವಿರುದ್ಧ ಬೇಸರ ಹೊರ ಹಾಕಿದ್ದು ನಿಮಗೆ ಟಿಕೆಟ್ ಎಂದು ಹೇಳಿದ್ದರು ಆದರೆ ಕೊನೆಗೆ ರಕ್ಷಣೆಗೆ ಯಾರು ಬರಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಸಂಪರ್ಕಿಸಿರುವ ವಿಚಾರ ಒಪ್ಪಿಕೊಂಡ ಡಿವಿ ಸದಾನಂದಗೌಡರು ನನ್ನ ಬೇರೆ ಬೇರೆಯವರು ಬಂದು ಸಂಪರ್ಕ ಮಾಡುತ್ತಿದ್ದಾರೆ.
ನಿನ್ನೆ ನಮ್ಮ ಪಕ್ಷದ ಪ್ರಮುಖ ನಾಯಕರು ಒಬ್ಬರು ಬಂದಿದ್ದರು. ನಿನ್ನೆ ಬಂದು ಸಾಂತ್ವನ ಮಾಡಿರುವುದಂತೂ ನಿಜ ಬೇರೆ ಬೇರೆ ಸಂಗತಿಗಳು ನಡೆಯುತ್ತಿವೆ ಎಂದು ಡಿವಿ ಸದಾನಂದ ಗೌಡ ತಿಳಿಸಿದರು.ಇಂದು ನನ್ನ ಜನ್ಮದಿನ ನಾಳೆ ನಾನು ಎಲ್ಲವನ್ನು ತಿಳಿಸುತ್ತೇನೆ. ಮುಂದಿನ ನಿರ್ಧಾರ ನನ್ನ ಕುಟುಂಬಸ್ಥರ ಜೊತೆ ಚರ್ಚಿಸಬೇಕು ದೆಹಲಿಯಲ್ಲಿ ರಾಜ್ಯದಲ್ಲಿ ಒಂದಷ್ಟು ವಿದ್ಯಮಾನ ನಡೆದಿದೆ.
ನಿಮಗೆ ಟಿಕೆಟ್ ಅಂದ್ರು ಕೊನೆ ಕ್ಷಣದಲ್ಲಿ ರಕ್ಷಣೆಗೆ ಬರಲಿಲ್ಲ. ಕೆಲವೊಂದು ಮನದಾಳದ ವಿಚಾರವನ್ನು ಹೇಳಿಕೊಳ್ಳಬೇಕಿದೆ ಅದಕ್ಕಾಗಿ ನಾಳೆ ಸುದ್ದಿಗೋಷ್ಠಿ ಕರೆಯುತ್ತೇನೆ. ಯಾವ ನಿರ್ಣಯ ತೆಗೆದುಕೊಳ್ಳುತ್ತೇನೆ ಎಂದು ನಾಳೆ ಹೇಳುತ್ತೇನೆ ಎಂದು ತಿಳಿಸಿದರು.
ಈಶ್ವರಪ್ಪ ಅವರನ್ನು ಭೇಟಿಯಾಗಿ ಮಾತನಾಡಿದ್ದೇನೆ.
ಪಕ್ಷದಲ್ಲಿ ನಮಗೆ ಯಾರಿಗೆಲ್ಲ ಮನಸಿಗೆ ನೋವಾಗಿದೆಯೋ ಒಟ್ಟಿಗೆ ಹೋಗಿ ವರಿಷ್ಠರ ಭೇಟಿಯಾಗಿ ತೀರ್ಮಾನಿಸೋಣ ಅಂದಿದ್ದೆ, ಆದರೆ ಈಶ್ವರಪ್ಪ ತಮ್ಮದೇ ಆದ ನಿರ್ಣಯ ತೆಗೆದುಕೊಂಡಿದ್ದಾರೆ ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ತಿಳಿಸಿದರು.