ಸತೀಶ್ ನೀನಾಸಂ ಹಾಗೂ ಡಿಂಪಲ್ ಕ್ವೀನ್ ರಚಿತರಾಮ್ ಅಭಿನಯದ ಮ್ಯಾಟ್ನಿ ಸಿನಿಮಾ ಇವಾಗಲೇ ಟೈಲರ್ ಮತ್ತೆ ಹಾಡುಗಳ ಮೂಲಕ ಸಿಕ್ಕಾಪಟ್ಟೆ ನಿರೀಕ್ಷೆಯಲ್ಲಿದೆ.ಇತ್ತೀಚಿಗಷ್ಟೇ ದರ್ಶನ್ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಕೊಡುವ ಮೂಲಕ ಚಿತ್ರಕ್ಕೆ ಸಾಥ್ ನೀಡಿದ್ದರು.ಮ್ಯಾಟ್ನಿಯಲ್ಲಿ ಸತೀಶ್ ನಿನಾಸಂ, ರಚಿತಾ ರಾಮ್ ಅದಿತಿ ಪ್ರಭುದೇವ ಮಾತ್ರವಲ್ಲದೆ ಇನ್ನೂ ಸಾಕಷ್ಟು ಕಲಾವಿದರ ದಂಡೇ ಇದೆ.
ಸಿನಿಮಾ ಹಾರರ್ ಕಾಮಿಡಿ ಜೊತೆಗೆ ಸ್ನೇಹಿತರ ಸಮಾಗಮ ಕೂಡ ಆಗಿದೆ. ಸತೀಶ್ ಅವರ ಸ್ನೇಹಿತರಾಗಿ ನಟ ನಾಗಭೂಷಣ್ ಶಿವರಾಜ ಕೆ ಆರ್ ಪೇಟೆ ಪೂರ್ಣ ಮತ್ತು ದಿಗಂತ್ ದಿವಾಕರ್ ಕಾಣಿಸಿಕೊಂಡಿದ್ದಾರೆ. ರಿಯಲ್ ಲೈಫ್ ನಲ್ಲಿ ಇವರೆಲ್ಲ ಹೇಗೆ ಬೆಸ್ಟ್ ಫ್ರೆಂಡ್ಸೋ ಹಾಗೆ ರೀಲ್ ಮೇಲು ಕೂಡ ಸ್ನೇಹಿತರಾಗಿ ಮಿಂಚುತ್ತಾರೆ.
ಚಿತ್ರದಲ್ಲಿ ನಟ ನಾಗಭೂಷಣ್ ನೆಕ್ಸನ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಾಗಭೂಷಣ್, ನೀನಾಸಮ್ ಸತೀಶ್ ಜೊತೆ ಕಾಣಿಸಿಕೊಂಡಿದ್ದಾರೆ. ಪಾತ್ರ ತುಂಬಾ ಚೆನ್ನಾಗಿದೆ. ಸಿನಿಮಾ ಕೂಡ ಅದ್ಭುತವಾಗಿ ಮೂಡಿಬಂದಿದೆ’ ಎಂದರು.ಕಾಮಿಡಿ ಪಾತ್ರದ ಮೂಲಕ ಕನ್ನಡ ಅಭಿಮಾನಿಗಳನ್ನು ರಂಜಿಸುತ್ತಿರುವ ನಟ ಶಿವರಾಜ್ ಕೆ ಆರ್ ಪೇಟೆ ಮ್ಯಾಟ್ನಿಯಲ್ಲಿ ನವೀನ್ ಎನ್ನುವ ರಿಯಲ್ ಎಸ್ಟೇಟರ್ ಆಗಿ ಕಾಣಿಕೊಂಡಿದ್ದಾರೆ. ವಿಶೇಷ ಎಂದರೆ ಶಿವರಾಜ್ ಕೆಆರ್ ಪೇಟೆ ಮತ್ತು ನೀನಾಸಮ್ ಅವರ ಕಾಂಬಿನೇಷನ್ ನ ನಾಲ್ಕನೇ ಸಿನಿಮಾ ಇದಾಗಿದೆ.
ಕಾಮಿಡಿ ಶಿವರಾಜ್ ಕೆಆರ್ ಪೇಟೆ ಅವರಿಗೆ ಹೊಸದೇನಲ್ಲ, ಈ ಸಿನಿಮಾದಲ್ಲಿ ಕಾಮಿಡಿ ಜೊತೆಗೆ ಹಾರರ್ ಕೂಡ ಇರುವುದು ಅಭಿಮಾನಿಗಳಿಗೆ ಡಬಲ್ ಧಮಾಕವಾಗಿದೆ. ಈ ಬಗ್ಗೆ ಮಾತನಾಡಿದ ಶಿರಾಜ್ ಕೆ.ಆರ್ ಪೇಟೆ, ‘ಟಿಕೆಟ್ ತೆಗೆದುಕೊಂಡು ಚಿತ್ರಮಂದಿರದೊಳಗೆ ಹೋದರೆ ಈ ಬೇಸಿಗೆಯಲ್ಲೂ ಐಪಿಎಲ್ ಮರೆತು ತಂಪಾಗಿ ಸಿನಿಮಾ ನೋಡಿ, ಹೊರಬಂದ ಅನುಭವವಾಗುತ್ತೆ’ ಎಂದು ಹೇಳಿದರು.