ಹೊಸಕೋಟೆ: ಹೊಸಕೋಟೆ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘವು 2023-24ನೇ ಸಾಲಿನಲ್ಲಿ ಗುರಿ ಮೀರಿ ಪ್ರಗತಿ ಸಾಧಿಸಿದೆ.ಸದರಿ ವರ್ಷದಲ್ಲಿ ಶೇ. 19ರಷ್ಟು ಏರಿಕೆಯೊಂ ದಿಗೆ 126 ಕೋಟಿ ರೂ.ಗಳ ವಿವಿಧ ಠೇವಣಿಗಳನ್ನು ಸಂಗ್ರಹಿಸಿದ್ದು, ಶೇ. 22ರಷ್ಟು ಏರಿಕೆಯೊಂದಿಗೆ ವಿವಿಧ ಯೋಜನೆಗಳಡಿ 105 ಕೋಟಿ ರೂ.ಗಳ ಸಾಲಗಳನ್ನು ವಿತರಿಸಿದೆ.
ಇದರೊಂದಿಗೆ ಅತ್ಯಧಿಕ ಶೇ. 99.20ರಷ್ಟು ಸಾಲ ವಸೂಲಾತಿಯನ್ನು ಸಹ ದಾಖಲಿಸುವ ಮೂಲಕ ಗ್ರಾಮಾಂತರ ಜಿಲ್ಲೆಯಲ್ಲಿ ಅತ್ಯುತ್ತಮ ಸ್ಥಾನ ಪಡೆದು ಕೊಂಡಿರುವ ಹೆಗ್ಗಳಿಕೆಯನ್ನು ಹೊಂದಿದೆ.31ನೇ ಮಾರ್ಚ್ 2024ರ ಅಂತ್ಯಕ್ಕೆ ಸಂಘವು 1.52 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದ್ದು, ಇದು ಹಿಂದಿನ ಸಾಲಿಗಿಂತಲೂ ಶೇ.48ರಷ್ಟು ಏರಿಕೆಯಾಗಿದೆ ಎಂದುಸಂಘದ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಹೇಳಿಕೆ ನೀಡಿದ್ದಾರೆ.
ಸಂಘದ ಉತ್ತಮ ಸಾಧನೆಗೆ ಸಹಕರಿಸಿದ ಆಡಳಿತ ಮಂಡಳಿ ನಿರ್ದೇಶಕರಿಗೆ, ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.ಗುರಿ ಸಾಧನೆಗೆ ಶ್ರಮಿಸಿದ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಎಸ್.ನಾರಾಯಣ ಶರ್ಮಾ, ವ್ಯವಸ್ಥಾಪಕ ನಂಜುಂಡೇಗೌಡ ಮತ್ತು ಸಿಬ್ಬಂದಿವರ್ಗವನ್ನು ಅಭಿನಂದಿಸಿದ್ದಾರೆ.