ಮುಲ್ಲನಪುರ್: ಕೊನೆಯ ಓವರ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಇತರ ರನ್ಗಳು, ಕೈ ಚೆಲ್ಲಿದ ಕ್ಯಾಚ್ಗಳು.. ಸೋಲಿನತ್ತ ವಾಲಿದ್ದ ಸನ್ರೈಸರ್ಸ್ ಹೈದರಾಬಾದ್ ಕೊನೆಗೂ ಗೆಲುವಿನ ನಗೆ ಬೀರಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಹೈದರಾಬಾದ್ 2 ರನ್ಗಳ ರೋಚಕ ಜಯ ಸಾಧಿಸಿದೆ.
183 ರನ್ಗಳ ಗುರಿಯನ್ನು ಪಡೆದ ಪಂಜಾಬ್ಗೆ ಕೊನೆಯ ಓವರ್ನಲ್ಲಿ 29 ರನ್ ಬೇಕಿತ್ತು. ಜಯದೇವ್ ಉನದ್ಕತ್ ಎಸೆದ ಮೊದಲ ಎಸೆತವನ್ನು ಅಶುತೋಶ್ ಶರ್ಮಾ ಸಿಕ್ಸರ್ಗೆ ಅಟ್ಟಿದರು. ನಂತರ ಎರಡು ವೈಡ್ ರನ್ ಬಂತು.ಎರಡನೇ ಎಸೆತವನ್ನು ಅಶುತೋಶ್ ಸಿಕ್ಸರ್ಗೆ ಅಟ್ಟುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ನಂತರ ಎರಡು ಎಸೆತಗಳಲ್ಲಿ 2 ರನ್ ಬಂದರೆ 5ನೇ ಎಸೆತ ವೈಡ್ ಆಯ್ತು.
ನಂತರದ ಎಸೆತದಲ್ಲಿ ಅಶುತೋಶ್ ಸಿಕ್ಸರ್ ಅಟ್ಟುವ ಪ್ರಯತ್ನ ಮಾಡಿದರು. ಆದರೆ ಡಿಪ್ ಮಿಡ್ ವಿಕೆಟ್ ಬಳಿ ತ್ರಿಪಾಠಿ ಕ್ಯಾಚ್ ಕೆಚೆಲ್ಲಿದರು. ಈ ಎಸೆತದಲ್ಲಿ 1 ರನ್ ಬಂತು. ಕೊನೆಯ ಎಸೆತವನ್ನು ಶಶಾಂಕ್ ಸಿಂಗ್ ಸಿಕ್ಸರ್ಗೆ ಅಟ್ಟಿದರು. ಈ ಮೂಲಕ ಕೊನೆಯ ಓವರ್ನಲ್ಲಿ 26 ರನ್ ಬಂತು.ಕೊನೆಯ 18 ಎಸೆತಗಳಲ್ಲಿ ಪಂಜಾಬ್ ಗೆಲ್ಲಲು 50 ರನ್ಗಳು ಬೇಕಿತ್ತು.
18 ಓವರ್ನಲ್ಲಿ ಪ್ಯಾಟ್ ಕಮ್ಮಿನ್ಸ್ 11 ರನ್ ಕೊಟ್ಟರೆ 19ನೇ ಓವರ್ನಲ್ಲಿ ನಟರಾಜನ್ ಕೇವಲ 10 ರನ್ ನೀಡಿದ್ದುಹೈದರಬಾದ್ ಗೆಲುವಿಗೆ ಕಾರಣವಾಯಿತು. ಉನದ್ಕತ್ ಒತ್ತಡಕ್ಕೆ ಒಳಗಾದ ಸಮಯದಲ್ಲಿ ಪ್ಯಾಟ್ ಕಮ್ಮಿನ್ಸ್ ನಗು ಮುಖದಿಂದ ಅವರನ್ನು ಮಾತನಾಡಿಸಿ ಆತ್ಮಸ್ಥೈರ್ಯ ತುಂಬಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಯಿತು.