ನೆಲಮಂಗಲ: ಕಳೆದ ಹತ್ತು ವರ್ಷದಲ್ಲಿ ದೇಶ ಅಭಿವೃದ್ಧಿ ಕಂಡು ಪ್ರಪಂಚದಲ್ಲಿ ಮೂರನೇ ಸ್ಥಾನ ಪಡೆದ ದೇಶ ನಮ್ಮದಾಗಿದೆ ದೇಶ ಕಟ್ಟುವ ಕೆಲಸ ಬಿಜೆಪಿಯಿಂದ ಮಾತ್ರ ಸಾಧ್ಯ ದೇಶಕ್ಕೆ ದೇವರು ಕೊಟ್ಟ ದೊಡ್ಡ ಕೊಡುಗೆ ನರೇಂದ್ರ ಮೋದಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ ತಿಳಿಸಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಬಿಜೆಪಿ ಘಟಕದಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಪೊರೇಷನ್ ತೊಟ್ಟಿ ತರ ಇದ್ದಂತ ರೈಲ್ವೆ ಸ್ಟೇಷನ್ ಅನ್ನು ಹೈಟೆಕ್ ರೈಲ್ವೆ ಸ್ಟೇಷನ್ಗಳಾಗಿ ಬದಲಾಗಿವೆ, ರಸ್ತೆ ಅಭಿವೃದ್ಧಿ,ಗ್ರಾಮ ಅಭಿವೃದ್ಧಿ ಯಾಗಿದೆ ಎಂದರೆ ಅದಕ್ಕೆ ಮೋದಿಯೇ ಕಾರಣ ಮೋದಿಯವರ ಯೋಜನೆಗಳು ಪ್ರತಿ ಮನೆಮನೆಗಳು ತಲುಪಿದ್ದು ಮತ್ತೆ ಸರಕಾರ ಬಂದರೆ ಇನ್ನಷ್ಟು ಸಾಧನೆಗಳು ಆಗಲೇ ಎಂದರು.
ಸಿದ್ದರಾಮಯ್ಯ ಒಬ್ಬ ಜಾತಿವಾದಿ ಮನುಷ್ಯ ಒಕ್ಕಲಿಗ ಲಿಂಗಾಯಿತ ಜಾತಿಯವರನ್ನು ನೋಡಿದರೆ ಅವರಿಗೆ ಆಗುವುದಿಲ್ಲ ಅದರಲ್ಲೂ ಎಸ್ ಸಿ ಎಸ್ ಟಿ ಜನಾಂಗದವರನ್ನು ಕಂಡರೆ ಮೊದಲೇ ಆಗುವುದಿಲ್ಲ ಎಸ್ಸಿ ಎಸ್ಟಿ ಜನಾಂಗದವರಿಗೆ ಮೀಸಲಿಟ್ಟು ಹಣವನ್ನು ಬೇರೆ ಭಾಗ್ಯಗಳಿಗೆ ಬೇರೆ ಸಮುದಾಯಕ್ಕೆ ಬಳಸಿ ದಲಿತ ಸಮುದಾಯಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಮೋದಿ ಕೊಡುಗೆ: ಸ್ವಚ್ಛ ಭಾರತ ಮಿಷನ್ ಅಭಿಯಾನ 2014-2023, 167510 ಶೌಚಾಲಯಗಳು, ಉಜ್ವಲ ಯೋಜನೆ ಅಡಿ ಸುಮಾರು 25 ಲಕ್ಷ ಎಲ್ಇಡಿ ಬಲ್ಪ್ ವಿತರಣೆ, ಕಿಸಾನ್ ಸಮ್ಮನ್ ಯೋಜನೆ 1,54,319 ರೈತರಿಗೆ ಹಣ,ಜಲಜೀವನ್ ಮಿಷನ್ 2,89,145 ಟ್ಯಾಪ್ ಸಂಪರ್ಕ,
ಆಯುಷ್ಮಾನ್ ಭಾರತ್ ಯೋಜನೆ 6,54,461 ಫಲಾನುಭವಿಗಳು, ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಒಟ್ಟು 75,637 ಮನೆಗಳ ನಿರ್ಮಾಣ, ಉಜ್ವಲ ಯೋಜನೆ ಅಡಿ ಗ್ಯಾಸ್ ಸಂಪರ್ಕಒಟ್ಟು ಸುಮಾರು 2 ಲಕ್ಷ ಕುಟುಂಬಗಳಿಗೆ ಅನುಕೂಲಪಡೆದುಕೊಂಡಿದ್ದಾರೆ,
ಹೀಗೆ ಹಲವಾರು ಯೋಜನೆ ಗಳನ್ನ ತಂದಂತ ನರೇಂದ್ರ ಮೋದಿ ಅವರನ್ನು ಚಿಕ್ಕಬಳ್ಳಾಪುರದ ಕ್ಷೇತ್ರದ ಜನತೆ ನೆನೆಸಿಕೊಂಡು ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರನ್ನು ಗೆಲ್ಲಿಸಬೇಕು ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಶಾಸಕ ಎಂ ವಿ ನಾಗರಾಜ್, ಬಿಜೆಪಿ ಮುಖಂಡ ಸಪ್ತಗಿರಿ ಶಂಕರ್ ನಾಯಕ್, ಎನ್ಡಿಎ ಮಾಜಿ ಅಧ್ಯಕ್ಷ ಮಲ್ಲಯ್ಯ,ಸತೀಶ್, ರಮೇಶ್ ಮುಂತಾದವರು ಇದ್ದರು.