ಬೆಂಗಳೂರು ನಗರ ಜಿಲ್ಲೆ: ಸಾರ್ವತ್ರಿಕ ಲೋಕಸಭಾ ಚುನಾವಣೆ 2024 ರ ಹಿನ್ನೆಲೆಯಲ್ಲಿ 25-ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 161- ಸಿ.ವಿ.ರಾಮನ್ ನಗರ ವಿಧಾನಸಭಾ ಕೇತ್ರ, 162 ಶಿವಾಜಿ ನಗರ ವಿಧಾನಸಭಾ ಕೇತ್ರ, 163- ಶಾಂತಿ ನಗರ ವಿಧಾನಸಭಾ ಕೇತ್ರಗಳಲ್ಲಿನ ಮತದಾನ ಕೇಂದ್ರಕ್ಕೆ ಭೇಟಿ ನೀಡಿ ಮತದಾನ ಪರಿವೀಕ್ಷಣೆ ನಡೆಸಲಾಯಿತು.
161-ಸಿ.ವಿ.ರಾಮನ್ ನಗರ ವಿಧಾನಸಭಾ ಕೇತ್ರದ ವ್ಯಾಪ್ತಿಯಲ್ಲಿ ಬರುವ ಕೇಂದ್ರೀಯ ವಿದ್ಯಾಲಯ ಡಿ.ಆರ್.ಡಿ.ಒ, ಸಿ.ವಿ.ರಾಮನ್ ನಗರ, ಬೆಂಗಳೂರು -093 ಇಲ್ಲಿ ಮತದಾನ ಕೇಂದ್ರದಲ್ಲಿ ಒಟ್ಟು 15 ಬೂತ್ ಗಳಿದ್ದು, ಆದರಲ್ಲಿ ಒಂದು ಪಿಂಕ್ ಬೂತ್ ಕೇಂದ್ರ ಮತ್ತು ಯುವ ಮತದಾರರು ಕಾರ್ಯ ನಿರ್ವಹಿಸುತ್ತಿರುವ ಮತಗಟ್ಟೆ ಕೇಂದ್ರ ವಿಶೇಷವಾಗಿದೆ.
ಈ ಮತದಾನ ಕೇಂದ್ರದಲ್ಲಿ ಸಿ.ವಿ.ರಾಮನ್ ನಗರ ನಿವಾಸಿಯಾದ ಶಿವರಾಮಕೃಷ್ಣ ಶಾಸ್ತ್ರಿ ಅವರು ತಮ್ಮ 86ನೇ ವಯಸ್ಸಿನಲ್ಲೂ ಉತ್ಸಾಹದಿಂದ ಮತಗಟ್ಟೆಗೆ ಬಂದು 20ನೇ ಬಾರಿ ಮತದಾನ ಮಾಡಿದರು. ಹಿರಿಯ ನಾಗರಿಕರಿಗೆ ಮನೆಯಲ್ಲಿ ಮತದಾನ ಮಾಡಲು ಅವಕಾಶವಿತ್ತು. ಆದರೆ, ಮತಗಟ್ಟೆಯಲ್ಲೇ ಮತದಾನ ಮಾಡಬೇಕೆಂದು ಶಿವರಾಮಕೃಷ್ಣ ಶಾಸ್ತ್ರಿ ಅವರು ತೀರ್ಮಾನಿಸಿದ್ದರು. ಹೀಗಾಗಿ, ಮಗ ಹಾಗೂ ಸೊಸೆ ಜೊತೆ, ಡಿಆರ್ಡಿಒ ಕೇಂದ್ರಿಯ ವಿದ್ಯಾಲಯದ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿದರು. ಅವರನ್ನು ಪೊಲೀಸರು, ವ್ಹೀಲ್ ಚೇರ್ ನಲ್ಲಿ ಮತಗಟ್ಟೆಗೆ ಕರೆದೊಯ್ದು ಮತ ಚಲಾಯಿಸಲು ಅನುಕೂಲ ಮಾಡಿ ಕೊಟ್ಟರು.