ಹೊಸದಿಲ್ಲಿ: ಇಂಡಿಯನ್ ಡೆಂಟಲ್ ಅಸೋಸಿಯೇಷನ್ನ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಸುಮಾರು 80% ಭಾರತೀಯರು ಹಲ್ಲಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅದರಲ್ಲಿ ಬಹುತೇಕ ಜನರಿಗೆ ತಮ್ಮ ಅವರ ಸ್ಥಿತಿಯ ಕುರಿತು ಮಾಹಿತಿ ಹೊಂದಿಲ್ಲ.
ಮೌಖಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಅಗತ್ಯ ಮನಗಂಡ ಡಾಬರ್ ರೆಡ್ ಪೇಸ್ಟ್ ಕಂಪನಿ ತಮ್ಮ ಓರಲ್ ಕೇರ್ ಫೆಸ್ಟ್ ತಿಂಗಳಲ್ಲಿ ಸ್ಮಾರ್ಟ್ ಬಜಾರ್ ಸಹಯೋಗದೊಂದಿಗೆ ಪ್ರವರ್ತಕ ಉಪಕ್ರಮವಾದ ಎಐ ತಂತ್ರಜ್ಞಾನಆಧರಿತ ಡೆಂಟಲ್ ಕ್ಯಾಂಪ್ಗಳನ್ನು ಆಯೋಜಿಸಿದೆ. ಆಧುನಿಕ ತಂತ್ರಜ್ಞಾನ ಮತ್ತು ಸಾಂಪ್ರದಾಯಿಕ ಆರೋಗ್ಯ ರಕ್ಷಣೆಯ ತತ್ವಗಳನ್ನು ಹೊಂದಿಸಿಕೊಂಡು ಈ ಅಭಿಯಾನ ನಡೆಸಲಾಗುತ್ತದೆ.
ಈ ಉಪಕ್ರಮದಲ್ಲಿ ಎಐ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು, ಈ ಅಭಿಯಾನದಲ್ಲಿ ಸ್ಮೈಲೋ.ಎಐ ರೂಪಿಸಿರುವ ಎಐ ಆಧರಿತ ದಂತ ತಪಾಸಣಾ ಕ್ರಮಗಳನ್ನು ಬಳಸಲಾಗುತ್ತಿದೆ. ಈ ನವೀನ ಸಾಧನವನ್ನು ಹಲ್ಲಿನ ಆರೋಗ್ಯ ಮೌಲ್ಯಮಾಪನ ಮಾಡಲು ಬಳಸಲಾಗುತ್ತದೆ. ಉತ್ತಮ ಕಾರ್ಯವಿಧಾನಗಳ ತ್ವರಿತವಾಗಿ ರೋಗನಿರ್ಣಯ ಮಾಡುತ್ತದೆ. ಎಐ ಅನ್ನು ಬಳಸುವ ಮೂಲಕ, ಡಾಬರ್ ರೆಡ್ ಪೇಸ್ಟ್ ಮತ್ತು ಸ್ಮಾರ್ಟ್ ಬಜಾರ್ ಲಿಮಿಟೆಡ್ ಹಲ್ಲಿನ ಆರೋಗ್ಯದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗಮನಾರ್ಹ ಹೆಜ್ಜೆ ಇಟ್ಟಿದೆ.
ಡಾಬರ್ನ ಓರಲ್ ಕೇರ್ನ ಮಾರ್ಕೆಟಿಂಗ್ ಮುಖ್ಯಸ್ಥ ಶ್ರೀ ಅಗಸ್ಟಸ್ ಡೇನಿಯಲ್, “ಡಾಬರ್ ರೆಡ್ ಪೇಸ್ಟ್, ವಿಶ್ವದ ಮುಂಚೂಣಿಯಲ್ಲಿರುವ ಆಯುರ್ವೇದ ಟೂತ್ಪೇಸ್ಟ್ ಆಗಿದ್ದು, ಆಯುರ್ವೇದದ ಮೂಲಕ ಭಾರತದ ಗ್ರಾಹಕರ ಮೌಖಿಕ ಆರೋಗ್ಯವನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ. ಲವಂಗ, ಪುದಿನಾ, ತ್ರಿಮಲ ಇತ್ಯಾದಿಯಂತಹ ಸಾಮಾಗ್ರಿಗಳನ್ನು ಬಳಸಿಕೊಂಡು ರಚಿಸಿರುವ ಆಯುರ್ವೇದ ಉತ್ಪನ್ನವು ಹಲ್ಲಿನ ಸಮಸ್ಯೆಗಳನ್ನು ನಿರ್ಮೂಲನೆ ಮಾಡುವ ಉದ್ದೇಶ ಹೊಂದಿದೆ.
ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು, ಪ್ರತಿ 6 ತಿಂಗಳಿಗೊಮ್ಮೆ ದಂತವೈದ್ಯರನ್ನು ಭೇಟಿ ಮಾಡುವುದು ಮತ್ತು ಪ್ರಾಯೋಗಿಕವಾಗಿ ಸಾಬೀತಾಗಿರುವ ಆಯುರ್ವೇದ ಟೂತ್ಪೇಸ್ಟ್ ಅನ್ನು ಬಳಸುವುದು ಇತ್ಯಾದಿ ವರ್ತನೆಗಳನ್ನು ರೂಢಿಸಿಕೊಳ್ಳಲು ಹಲ್ಲಿನ ಆರೋಗ್ಯ ಜಾಗೃತಿ ಅಭಿಯಾನದಲ್ಲಿ ತಿಳಿಸಲಾಗುವುದು. ಸ್ಮಾರ್ಜಡ್ ಬಜಾರ್ ನೊಂದಿಗಿನ ಸಹಯೋಗದ ಮೂಲಕ ಸ್ಮೈಲೋ.ಎಐನ ಎಐ ಆಧರಿತ ಉಪಕರಣಗಳನ್ನು ಬಳಸಿ ಅಭಿಯಾನ ನಡೆಸಲು ನಾವು ಉತ್ಸುಕರಾಗಿದ್ದೇವೆ” ಎಂದು ಹೇಳಿದರು.
ಸ್ಮೈಲೋ.ಎಐ ಸಂಸ್ಥಾಪಕಿ ಡಾ. ಪದ್ಮಾ ಗಡಿಯಾರ್, “ಈ ಪ್ರವರ್ತಕ ಉಪಕ್ರಮದಲ್ಲಿ ಡಾಬರ್ ರೆಡ್ ಪೇಸ್ಟ್ ಮತ್ತು ಸ್ಮಾರ್ಟ್ ಬಜಾರ್ ಜೊತೆ ಸಹಯೋಗ ಹೊಂದಲು ನಾವು ಸಂತೋಷ ಹೊಂದಿದ್ದೇವೆ. ಸ್ಮೈಲೋ.ಎಐನಲ್ಲಿ ನಾವು ಮೌಖಿಕ ಆರೈಕೆ ಸೇವಾ ಕ್ಷೇತ್ರ ಪರಿವರ್ತನೆ ಮಾಡುವ ಹೊಸ ತಂತ್ರಜ್ಞಾನ ಬಳಕೆಯನ್ನು ಸಾಧಿಸಿದ್ದೇವೆ. ನಮ್ಮ ಎಐ ತಂತ್ರಜ್ಞಾನ ಉತ್ಪನ್ನವು ಬಳಕೆದಾರರಿಗೆ ಮೌಖಿಕ ಆರೋಗ್ಯದ ಶಿಕ್ಷಣ ನೀಡುತ್ತದೆ, ಹಲ್ಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಸಮುದಾಯಕ್ಕೆ ಎಐ-ಆಧರಿತ ದಂತ ತಪಾಸಣಾ ವ್ಯವಸ್ಥೆಯನ್ನು ಒದಗಿಸುವ ಮೂಲಕ, ಪ್ರತಿಯೊಬ್ಬರೂ ಗುಣಮಟ್ಟದ ದಂತ ಆರೈಕೆ ದೊರಕಿಸುವ ಪ್ರಯತ್ನ ಮಾಡುತ್ತಿದ್ದೇವೆ” ಎಂದು ಹೇಳಿದರು.