ನವದೆಹಲಿ: ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಮಾಜಿ ಆಟಗಾರ ಗೌತಮ್ ಗಂಭೀರ್ ವರನ್ನು ನೇಮಕ ಮಾಡಲು ಬಿಸಿಸಿಐ ತೀರ್ಮಾನಿಸಿದೆ.ಮುಂದಿನ ತಿಂಗಳು ಕೆರಿಬಿಯನ್ ಮತ್ತು ಯುಎಸ್ಎಯಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಮುಕ್ತಾಯದೊಂದಿಗೆ ಕೊನೆಗೊಳ್ಳಲಿರುವ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯ ನಂತರ ಗೌತಮ್ ಗಂಭೀರ್ ಅವರನ್ನು ಜುಲೈ 1ರಿಂದ ಮೂರುವರೆ ವರ್ಷಗಳ ಕಾಲ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಗಂಭೀರ್ ಅವರನ್ನು ನೇಮಿಸಲು ಬಿಸಿಸಿಐ ಉತ್ಸುಕವಾಗಿದೆ.
ಪ್ರಸ್ತುತ ಕೋಲ್ಕತಾ ನೈಟ್ ರೈಡರ್ಸ್ನಲ್ಲಿ ಮೆಂಟರ್ ಆಗಿ ಸೇವೆ ಸಲ್ಲಿಸುತ್ತಿರುವ ಗೌತಮ್ ಗಂಭೀರ್ ಅವರಿಗೆ ಅಧಿಕೃತ ಕೋಚಿಂಗ್ ಅನುಭವವಿಲ್ಲ, ಆದರೆ ಕೆಕೆಆರ್ ಮತ್ತು ಲಕ್ನೋ ಸೂಪರ್ ಜೈಂಟ್ಸೋನ್ನೊಂದಿಗೆ ಕಳೆದ ಎರಡು ಋತುಗಳಲ್ಲಿ ಕಳೆದ ರೀತಿಯ ಹಾಗೂ ಆಟಗಾರರಲ್ಲಿ ತುಂಬಿದ ಆತ್ಮಸ್ಥೈರ್ಯವನ್ನು ಬಿಸಿಸಿಐ ಗಮನಿಸಿ ಈ ತೀರ್ಮಾನಕ್ಕೆ ಬಂದಿದ್ದಾರೆಂದು ತಿಳಿದುಬಂದಿದೆ.