ಭೋಪಾಲ್: ಒಲಿಂಪಿಯನ್ ಮನು ಭಾಕರ್ ಅವರು 10ಮೀ. ಏರ್ ಪಿಸ್ತೂಲ್ ಒಲಿಂಪಿಕ್ ಆಯ್ಕೆ ಟ್ರಯಲ್ಸ್ನಲ್ಲಿ ಪ್ರಾಬಲ್ಯ ಮೆರೆದರು. ಶುಕ್ರವಾರ ನಡೆದ ಟ್ರಯಲ್ಸ್ ವೇಳೆ ಅವರು ಏಷ್ಯನ್ ಗೇಮ್ಸ್ ಪದಕ ವಿಜೇತೆ ಇಶಾ ಸಿಂಗ್ ವಿರುದ್ಧ ಪ್ರಾಬಲ್ಯ ಮೆರೆದರು.
ಭಾಕರ್ (241.0) ಮೊದಲ ಸ್ಥಾನ ಪಡೆದರೆ, ಇಶಾ (240.2) ಎರಡನೇ ಹಾಗೂ ರಿದಮ್ ಸಂಗ್ವಾನ್ (220.3) ಮೂರನೇ ಸ್ಥಾನ ಗಳಿಸಿದರು.
ಶೂಟಿಂಗ್ ದಿಗ್ಗಜ ಜಸ್ಪಾಲ್ ರಾಣಾ ಅವರಿಂದ ತರಬೇತಿ ಪಡೆಯುತ್ತಿರುವ ಭಾಕರ್, 25 ಮೀ. ಸ್ಪೋರ್ಟ್ಸ್ ಪಿಸ್ತೂಲ್ ವಿಭಾಗದಲ್ಲೂ ಉತ್ತಮ ಸಾಧನೆ ಪ್ರದರ್ಶಿಸಿದ್ದರು.
ಪ್ಯಾರಿಸ್ ಒಲಿಂಪಿಕ್ಸ್ಗೆ ಶೂಟಿಂಗ್ ತಂಡವನ್ನು ಆಯ್ಕೆ ಮಾಡಲು ಭಾರತ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ (ಎನ್ಆರ್ಎಐ) ನಾಲ್ಕು ಟ್ರಯಲ್ಸ್ಗಳ ಸರಣಿಯನ್ನು ನಡೆಸುತ್ತಿದೆ. ಮೊದಲ ಮೂರು ಸ್ಥಾನ ಪಡೆದವರು ಒಲಿಂಪಿಕ್ಸ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.