ಚಂದಾಪುರ: ಪ್ರತಿಯೊಂದು ಗಿಡ, ಮರದ ಬೇರು, ಕಾಂಡ, ಎಲೆಗಳಲ್ಲಿ ಪ್ರಾಣವಾಯು ಹಾಗೂ ಔಷಧೀಯ ಗುಣಗಳು ಇವೆ ಇದನ್ನು ತಿಳಿಯುವ ವಿಶಾಲ ಹೃದಯವಂತಿಕೆ ನಮಗೆ ಇರಬೇಕು, ಪ್ರಕೃತಿಯನ್ನು ರಕ್ಷಿಸಿದರೆ , ಪ್ರಕೃತಿಯು ನಮ್ಮೆಲ್ಲರನ್ನು ರಕ್ಷಿಸುತ್ತದೆ ಎಂಬುದಾಗಿ ಖ್ಯಾತ ಪರಿಸರ ತಜ್ಞರಾದ ಡಾ.ಎ.ಎನ್.ಯಲ್ಲಪ್ಪರೆಡ್ಡಿ ತಿಳಿಸಿದರು.
ಜಿಗಣಿಯ ಹೈಕಲ್ ಕಾರ್ಖಾನೆಯಲ್ಲಿ ಪರಿಸರ ದಿನಾಚರಣೆ,ವನಮಹೋತ್ಸವ ಹಾಗೂ ಪರಿಸರ ಸಂರಕ್ಷಣೆ ಹಾಗೂ ನಮ್ಮ ಹೊಣೆಗಾರಿಕೆ ಬಗ್ಗೆ ಕಾರ್ಮಿಕರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ನಾಶ: ಆಧುನಿಕತೆಯ ಹೆಸರಿನಲ್ಲಿ ನಾವು ಅಭಿವೃದ್ಧಿ ಸಾಧಿಸುವ ಉತ್ಸವದಲ್ಲಿ ಲಕ್ಷಾಂತರ ಮರಗಳ ನಾಶಮಾಡುತ್ತಿದ್ದಿವಿ.
ಇದು ಮನುಕುಲದ ದುರಂತವಾಗಿದೆ ವೈಜ್ಞಾನಿಕವಾಗಿ ನೋಡಿದಾಗ ಪ್ರಕೃತಿಯಲ್ಲಿನ ವಿವಿಧ ಮರಗಿಡಗಳಲ್ಲಿ ಔಷಧೀಯ ಗುಣಗಳು ಇವೆ,ಮಾನವನ ವಿವಿಧ ರೀತಿಯಲ್ಲಿ ಕಾಯುಲೆಗಳಿಗೆ ಪ್ರಕೃತಿಯಲ್ಲಿ ಚಿಕಿತ್ಸೆ ಇದೆ ಇದನ್ನು ನಾವುಗಳು ಸರಿಯಾಗಿ ಅರಿತು ಜಾಗೃತವಹಿಸಿ ಬೆಳೆಸಿದರೆ ಮಾನವ ಆರೋಗ್ಯವಂತನಾಗಿ ಬಾಳಬಹುದು ಎಂಬ ವೈಜ್ಞಾನಿಕ ಸತ್ಯವನ್ನು ಎಳೆ ಎಳೆಯಾಗಿ ಬಿಡಿಸಿ ಇಟ್ಟರು,
ಇದೇ ಸಂದರ್ಭದಲ್ಲಿ ಕಾರ್ಖಾನೆಯ ಮಾನವ ಸಂಪನ್ಮೂಲ ಇಲಾಖೆ ಪ್ರಧಾನ ವ್ಯವಸ್ಥಾಪಕರಾದ ವಿದ್ಯಾನಂದ ಶೆಟ್ಟಿ ಮಾತನಾಡುತ್ತ ನಮ್ಮ ಕಂಪನಿಯು ಪರಿಸರ ರಕ್ಷಣೆಯ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದು ಜಿಗಣಿ ಸುತ್ತಮುತ್ತಲಿನ ಕೆರೆಗಳನ್ನು ಅಭಿವೃದ್ಧಿಪಡಿಸಿದೆ ಹಾಗೂ ಸಾವಿರಾರು ಗಿಡಗಳನ್ನು ನಿಟ್ಟು ಬೆಳೆಸುತ್ತಿದೆ ಇದಕ್ಕೆ ಖ್ಯಾತ ಪರಿಸರ ತಜ್ಞರಾದ ಡಾ.ಎ.ಎನ್.ಯಲ್ಲಪ್ಪರೆಡ್ಡಿ ಅವರಂಥ ಹಿರಿಯ ಮಾರ್ಗದರ್ಶನ ಮತ್ತು ಸಲಹೆಗಳು ಅವಶ್ಯಕ ಎಂದರು. ಆಡಳಿತ ವರ್ಗ ಹಾಗೂ ಕಾರ್ಮಿಕರೊಂದಿಗೆ ಪರಿಸರ ಸಂರಕ್ಷಣೆ ಹಾಗೂ ನಮ್ಮ ಹೊಣೆಗಾರಿಕೆ ಬಗ್ಗೆ ಖ್ಯಾತ ಪರಿಸರ ತಜ್ಞ ಡಾ.ಎ.ಎನ್.ಯಲ್ಪಪ್ಪ ರೆಡ್ಡಿ ಸಂವಾದ ನಡೆಸಿದರು.
ಇದೇ ಸಂದರ್ಭದಲ್ಲಿ ಗಾರ್ಡನ್ ನಿರ್ವಹಣೆ ಕಾರ್ಮಿಕರಾದ ಬೆಟ್ಟಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಆನೇಕಲ್ ತಾಲ್ಲೂಕು ಕ್ಷೇತ್ರ ಶಿಕ್ಷಣ ಸಂಯೋಜಕ ಅಧಿಕಾರಿ ಕೆ.ಶಿವಣ್ಣ, ಶಿಕ್ಷಕರಾದ ಮಂಜುನಾಥ್, ಕವಿ ಹಾಗೂ ಪತ್ರಕರ್ತರಾದ ಮಹೇಶ್ ಊಗಿನಹಳ್ಳಿ,ಮಾನವ ಸಂಪನ್ಮೂಲ ಇಲಾಖೆ ಪ್ರಧಾನ ವ್ಯವಸ್ಥಾಪಕರಾದ ವಿದ್ಯಾನಂದ ಶೆಟ್ಟಿ ಪರಿಸರ ಆರೋಗ್ಯ ಮತ್ತು ಸುರಕ್ಷತೆ ಇಲಾಖೆ ಪ್ರಧಾನ ವ್ಯವಸ್ಥಾಪಕರಾದ ಪ್ರಕಾಶ ಭಾವಿಕಟ್ಟಿ , ಎಂಜಿನಿಯರಿಂಗ್ ಮತ್ತು ನಿರ್ವಹಣೆ ಇಲಾಖೆ ಪ್ರಧಾನ ವ್ಯವಸ್ಥಾಪಕರಾದ ಜಯತೀರ್ಥ ಕುಲಕರ್ಣಿ, ಉತ್ಪಾದನ ಇಲಾಖೆ ಪ್ರಧಾನ ವ್ಯವಸ್ಥಾಕರಾದ ಟಿ ಎಸ್ ರವಿ , ಕ್ಲಸ್ಟರ್ ಹೆಡ್ ರಾಜನ್ ಕುಮಾರ್ ಶುಕ್ಲಾ , ಮಾನವ ಸಂಪನ್ಮೂಲ ಇಲಾಖೆ ವ್ಯವಸ್ಥಾಪಕರಾದ ರಮೇಶ್ ಪಿ ಎಸ್, ಮಾನವ ಸಂಪನ್ಮೂಲ ಇಲಾಖೆ ವ್ಯವಸ್ಥಾಪಕ ರಾದ ರಮ್ಯಾ ಎನ್ , ಗುಣಮಟ್ಟ ಭರವಸೆ ಇಲಾಖೆ ಪ್ರಧಾನ ವ್ಯವಸ್ಥಾಪಕರಾದ ಶಿವಕುಮಾರ್ ಹಿರೇಮಠ ಇನ್ನೂ ಮುಂತಾದವ ಆಡಳಿತ ವರ್ಗದವರು ಮತ್ತು ಕಾರ್ಮಿಕರು ಭಾಗವಹಿಸಿದ್ದರು.