ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಬಿಜೆಪಿಯವರು ಪಿತೂರಿ ನಡೆಸಿಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸಂಚು ನಡೆಸುತ್ತಿವೆ ಎಂದು ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಆರೋಪಿಸಿದೆ.ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ. ರಾಮಚಂದ್ರಪ್ಪ, ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷದ ನಾಯಕರು ಅಧಿಕಾರ ಕಳೆದುಕೊಂಡು ವಿಲಿವಿಲಿ ಒದ್ದಾಡ್ತಿದ್ದಾರೆ.
ಹೇಗಾದ್ರೂ ಮಾಡಿ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರಿಬಾರದು ಅಂತ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಹೀಗೆ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಇವರ ಹಿನ್ನೆಲೆ ನೋಡಿದರೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಸಿಎಂ ಜೈಲಿಗೆ ಹೋಗಿ ಬಂದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಪ್ರಚಾರದ ಗೀಳಿಗಾಗಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಆಡಳಿತಕ್ಕೆ ಕಳಂಕ ಬರುವ ರೀತಿ ನಡೆದುಕೊಳ್ಳುತ್ತಿದ್ದಾರೆ.
ನಿಮಗಿಂತ ಮುಂಚಿತವಾಗಿಯೇ ನಾವು ಪಾದಯಾತ್ರೆಗೆ ಪ್ರತಿರೋಧ ಮಾಡುತ್ತೇವೆ. ಶೋಷಿತ ಸಮುದಾಯದ ಒಬ್ಬ ಮುಖ್ಯಮಂತ್ರಿ ಕೆಳಗಿಳಿಸಲು ಯತ್ನ ನಡೆಸಿದ್ದಾರೆ ಎಂದು ದೂರಿದರು.ಈ ಹಿಂದೆ ಇದೇ ಜನ ದೇವರಾಜ ಅರಸುಗೂ ಕಾಟ ಕೊಟ್ಟಿದ್ದರು. ಬಂಗಾರಪ್ಪರನ್ನು ಬಿಟ್ಟಿಲ್ಲ, ಮೇಲ್ಜಾತಿಯವರು ವೀರಪ್ಪ ಮೊಯ್ಲಿಗೂ ಬಿಟ್ಟಿಲ್ಲ ಮ್ಯಾನ್ ಹ್ಯಾಂಡಲಿಂಗ್ ಮಾಡಿದ್ದಾರೆ ಎಂದು ಕಿಡಿಕಾರಿದ ಅವರು, ಶಾಸಕ ರನ್ನು ಹೈಜಾಕ್ ಮಾಡಿಯೇ ಕುಮಾರಸ್ವಾಮಿ ಅಧಿಕಾರಕ್ಕೆ ಬಂದಿದ್ದು ಎಂದು ಗುಡುಗಿದ್ದಾರೆ.
ಜೆಡಿಎಸ್ ಅಧಿಕಾರದ ಹತ್ರಕ್ಕೇ ಹೋಗಿಲ್ಲ ಎಂದ ಅವರು, ಇದೇ ರೀತಿ ಮುಂದುವರಿದರೆ ರಾಜ್ಯದಲ್ಲಿ ದಂಗೆ ಏಳಬೇಕಾಗುತ್ತದೆಕಳಂಕ ತರುವ ಹುನ್ನಾರ ಆದರೆ ರಾಜ್ಯದಲ್ಲಿ ದಂಗೆ ಏಳುತ್ತದೆ ಎಂಬ ಎಚ್ಚರಿಕೆ ನೀಡಿದರು.ಕೇಂದ್ರ ಸರ್ಕಾರದ ವಿರುದ್ದವೂ ದಂಗೆ ಏಳಬೇಕಾಗುತ್ತದೆ ಎಂಬ ಖಡಕ್ ಸೂಚನೆ ನೀಡಿದ ರಾಮಚಂದ್ರಪ್ಪ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ತಾರೆ ಎಂಬ ಕಾರಣಕ್ಕೆ ಶೋಷಿತ ವರ್ಗ ಕಾಂಗ್ರೆಸ್ ಬೆಂಬಲಿಸಿದೆ. ಸಿದ್ದರಾಮಯ್ಯಗೆ ಕಳಂಕ ತರುವ ಪ್ರಯತ್ನ ನಡೆದರೆ ನಾವು ಸುಮ್ಮನೆ ಇರುವುದಿಲ್ಲ ಎಂದಿದ್ದಾರೆ.
ಒಕ್ಕೂಟದ ಮಾವಳ್ಳಿ ಶಂಕರ್ ಮಾತನಾಡಿ, ಉದ್ದೇಶಪೂರ್ವಕವಾಗಿ ಸಿದ್ದರಾಮಯ್ಯ ಹೆಸರಿಗೆ ಕಳಂಕ ತರುವ ಕೆಲಸ ಬಿಜೆಪಿ ಮಾಡುತ್ತಿದೆ. ಸಿದ್ದರಾಮಯ್ಯ ಕಳಂಕ ರಹಿತರು. ಆದರೆ ರಾಜಕೀಯ ದುರುದ್ದೇಶದಿಂದ ಆರೋಪ ಮಾಡಲಾಗುತ್ತಿದೆ. ಮೂಡಾತ್ಮರು ಬಿಜೆಪಿಯವರು ರಾಜಕೀಯ ಹಿತಾಸಕ್ತಿ ಕಾಪಾಡಿಕೊಳ್ಳಲು ಹೀಗೆ ಆರೋಪ ಮಾಡ್ತಿದ್ದಾರೆ.ಬಿಜೆಪಿ ಯನ್ನು ಜನರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ತಳ ಸಮುದಾಯದ ನಾಯಕತ್ವ ಇದ್ದಾಗ ಬಲಿಷ್ಟ ಜಾತಿಗಳು ಇಂಥ ಕೆಲಸ ಮಾಡ್ತಾರೆ. ಶೋಷಿತ ಸಮುದಾಯ ಇದನ್ನು ತೀವ್ರವಾಗಿ ಖಂಡಿಸುತ್ತದೆ.
ಇವರ ಮೇಲಿನ ಆರೋಪ ಗಳನ್ನೂ ಕೂಡ ನಾವು ಬಯಲಿಗೆ ಎಳೆಯುತ್ತೇವೆ. ಕೇತಗಾನಹಳ್ಳಿ ಜಮೀನು ವಂಚನೆಗೆ ಸಂಬಂಧಿಸಿ ನಾವು ಕುಮಾರಸ್ವಾಮಿ ಯವರ ದಾಖಲೆ ಬಿಡುಗಡೆ ಮಾಡ್ತೇವೆ.ಎಲ್ಲಿ ಜಾತಿ ಜನಗಣತಿ ಹೊರಗಡೆ ಬರುತ್ತದೆ ತಮ್ಮ ಅಧಿಕಾರಕ್ಕೆ ಕುತ್ತು ಬರುತ್ತದೆ ಎಂಬ ಕಾರಣಕ್ಕೆ ತಳ ಸಮುದಾಯದ ನಾಯಕನಿಗೆ ಕಪ್ಪು ಚುಕ್ಕೆ ಬರುವಂತೆ ಮಾಡಲಾಗುತ್ತಿದೆ. ನಾವೂ ಕೂಡ ರಾಜಕೀಯವಾಗಿ ಉತ್ತರ ಕೊಡಬೇಕಾಗುತ್ತದೆ. ನಾವೂ ಕೂಡ ಬೀದಿ ಹೋರಾಟ ಮಾಡುವುದಕ್ಕೆ ಸಿದ್ದರಿದ್ದೇವೆ ಎಂದ ಅವರು, ಕುಮಾರಸ್ವಾಮಿ ಗೆ ನೈತಿಕತೆ ಇದ್ದರೆ ಕೇತಗಾನಹಳ್ಳಿ ಯಲ್ಲಿ ದಲಿತರ ಜಮೀನು ವಂಚಿಸಿ ಪಡೆದುಕೊಂಡಿದ್ದಾರೆ ಅದನ್ನು ಹಿಂತಿರುಗಿಸಲಿ ಎಂದು ಆಗ್ರಹಿಸಿದ್ದಾರೆ.