ದೇವನಹಳ್ಳಿ: ಬರಿ ಅರ್ಧಗಂಟೆ ಸುರಿದ ಮಳೆಗೆ ದೇವನಹಳ್ಳಿ ಮುಖ್ಯರಸ್ತೆಯಲ್ಲಿ ಮಳೆನೀರು ಹರಿದು ಪಾದಚಾರಿಗಳು ಪರದಾಡುವಂತಾಯಿತು, ಇನ್ನು ಗಂಟೆಗಟ್ಟಲೆ ಮಳೆಬಂದರೆ ಚರಂಡಿಗಳು ತುಂಬಿ ರಸ್ತೆ ಐಆವುದೆಂದು ತಿಳಿದಂತೆ ನೀರು ಹರಿಯುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿರುವ ಮುರಸಭೆ ಹಾಗೂ ಜನಪ್ರತಿನಿದಿಗಳು, ಇಂತಹ ಘಟನೆಗಳು ಪದೇಪದೇ ನಡೆಯುತ್ತಿದ್ದರೂ ಕಣ್ಣು ಕಾಣದಂತೆ ಪುರಸಭಾ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ.
ಮುಖ್ಯರಸ್ತೆ ಮುರಸಭೆಯ ಮುಂಭಾಗದಲ್ಲೆ ಇದ್ದರೂ ಯಾರೂ ಕಂಡರೂ ಕಾಣದಂತಿದ್ದಾರೆ, ರಸ್ತೆ ಪಕ್ಕದಲ್ಲಿರುವ ಮೋರಿಗಳು ಅನೇಕ ವರ್ಷಗಳಿಂದಲೂ ಹೂಳು ತುಂಬಿದ್ದರೂ ಸ್ವಚ್ಚ ಮಾಡುವಲ್ಲಿ ಪುರಸಭೆ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ತಮ್ಮ ಮನದಾಳದ ನೋವನ್ನು ಹೇಳಿಕೊಂಡರು.ಅನೇಕ ಸಲ ಪುರಸಭೆಗೆ ತಿಳಿಸಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಮುಖ್ಯರಸ್ತೆಯಲ್ಲೆ ಇಂತಹ ಅವಾಂತರಗಳಾಗಿದ್ದು ಇನ್ನೂ ಸಣ್ಣ ಚರಂಡಿಗಳ ಕಥೆ ಕೇಳುವುದೇ ಬೇಡ, ಇನ್ನು ಪುಟ್ಪಾತ್ಗಳ ಕಥೆ ನೋಡಿದರೆ ಸಾಮಾನ್ಯ ಜನ ನಡೆಯುವುದೇ ದುಸ್ತರ, ಅಂಗವಿಕಲರ, ವಯಸ್ಸಾದವರ ಪಾಡನ್ನು ದೇವರೇ ಕೇಳಬೇಕು,
ಸಾರ್ವಜನಿಕರು ಪುಟ್ಪಾತ್ ಮೇಲೆ ಹೋಗಲು ಸಾದ್ಯವೇ ಇಲ್ಲ ಏಕೆಂದರೆ ಪುಟ್ಪಾತ್ ತುಂಬಾ ಅಂಗಡಿಗಳನ್ನು ಇಟ್ಟು ಜನ ಓಡಾಡಲು ಸಾಧ್ಯವಾಗದ ರೀತಿ ತಮ್ಮ ಬಿಡಾರಗಳನ್ನು ಮಾಡಿಕೊಂಡಿದ್ದಾರೆ, ಇದು ಪುರಸಭಾ ಕಛೇರಿಯ ಮುಂಭಾಗದಲ್ಲೆ ಇಂತಹ ಕಥೆ, ಇಂತಹ ನರಕಸದೃಶ ದೃಶ್ಯಗಳು ಬೇಕಾದಷ್ಟಿದ್ದರೂ ಯಾರೂ ಇತ್ತ ಗಮನ ಹರಿಸುತ್ತಿಲ್ಲ ಇನ್ನಾದರೂ ಪುರಸಭೆ ಎಚ್ಚೆತ್ತುಕೊಳ್ಳುತ್ತದೆಯೋ ಕಾದು ನೋಡೋಣ.