ಬೆಂಗಳೂರು: ಬೊಮ್ಮನಹಳ್ಳಿ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿ ಸುಮಾರು ಏಳು ಲಕ್ಷ ರೂ ಬೆಲೆ ಬಾಳುವ 107 ಗ್ರಾಂ ಚಿನ್ನಾಭರಣ ಮತ್ತು 100 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.
ಇದಲ್ಲದೆ ಆರೋಪಿಯಿಂದ ದೇವರ ಬೆಳ್ಳಿಯ ಮುಖವಾಡವನ್ನು ಸಹ ವಶಪಡಿಸಿಕೊಂಡಿರುತ್ತಾರೆ, ಆರೋಪಿ ಬೊಮ್ಮನಹಳ್ಳಿ ಪೊಲೀಸ್ ಠಾಣೆಯ ವಿರಾಟ್ ನಗರದ ಮನೆ ಬೀಗ ಮುರಿದು ಲಾಕರ್ ನಿಲ್ಬಿಟ್ಟಿದ್ದ ವಸ್ತುಗಳನ್ನು ಕಳವು ಮಾಡಿದ್ದನ್ನು.ಮತ್ತೊಂದು ಪ್ರಕರಣದಲ್ಲಿ ಹನುಮಂತನಗರ ಪೊಲೀಸರು ಆರೋಪಿಯನ್ನು ಬಂಧಿಸಿ ಸುಮಾರು 31 ಲಕ್ಷ ರೂ ಬೆಲೆ ಮಾಡುವ 470 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.
ಈ ಆರೋಪಿಯು ಮನೆ ಬೀಗ ಮುರಿದು ಮೈಸೂರು ನಗರ ಮೈಸೂರು ಜಿಲ್ಲೆಯ ಇಲವಾಲ ಮತ್ತು ಬೆಂಗಳೂರು ನಗರದ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳವು ಮಾಡಿದ್ದನು ಎಂದು ಸುದ್ದಿಗಾರರಿಗೆ ನಗರ ಪೊಲೀಸ್ ಆಯುಕ್ತ ದಯಾನಂದ್ ರವರು ತಿಳಿಸಿದರು.