ಬೆಂಗಳೂರು: ಗೋವಿಂದರಾಜನಗರ ಪೊಲೀಸರು ದರೋಡೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಮೊಬೈಲ್ ಹಾಗೂ ನಗದು ಹಣ ವಶಪಡಿಸಿಕೊಂಡಿರುತ್ತಾರೆ.
ಕೇವಲ ಮೂರು ದಿನಗಳ ಹಿಂದೆರಾಮ ಕೃಷ್ಣಯ್ಯ ಎಂಬ ದರೋಡೆಗೊಳ ಗಾದ ವ್ಯಕ್ತಿಯು ನವರಂಗ ಟಾಕೀಸ್ ಬಳಿಮಧ್ಯರಾತ್ರಿ 11:30 ಸುಮಾರಿಗೆ ಆಟೋ ರಿಕ್ಷಾದಲ್ಲಿ ಬರುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ದರೋಡೆ ಮಾಡಿ900 ನಗದು ಹಣ ಮತ್ತು ಒಂದು ಮೊಬೈಲ್ ಅನ್ನು ಹೆದರಿಸಿ ದರೋಡೆ ಮಾಡಿ ಕೊಂಡು ಹೋಗಿದ್ದರು.
ಈ ಸಂಬಂಧ ರಾಮಕೃಷ್ಣಯ್ಯ ಗೋವಿಂದರಾಜ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಶಿವಕುಮಾರ್(32) ಮತ್ತು ಮಂಟೆಪ್ಪ(52)ವರ್ಷದ ವ್ಯಕ್ತಿಗಳನ್ನು ಬಂಧಿಸಿ ಮೊಬೈಲ್ ಆಗು ನಗದು ಹಣವನ್ನು ವಶಪಡಿಸಿಕೊಂಡಿರುತ್ತಾರೆ.