ಬೆಂಗಳೂರು: ಡಿಸಿಪಿ ಈಶಾನ್ಯ ವಲಯದ ವಿಭಾಗದಲ್ಲಿ ಬರುವ 12 ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ಬಿಬಿಎಂಪಿ ಅನುಮತಿ ಪಡೆಯದೆ ಬ್ಯಾನರ್ ಗಳನ್ನು ಸಾರ್ವಜನಿಕವಾಗಿ ರಸ್ತೆಗಳಲ್ಲಿ ಹಾಕಿದ್ದ ಸಂಘ ಸಂಸ್ಥೆಗಳ ಹಾಗೂ ಇತರರ ವಿರುದ್ಧ ಕರ್ನಾಟಕ ಡಿಸ್ ಫೀಗರ್ ಮೆಂಟ್ ಆಕ್ಟ್ ಅಡಿ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿ ಮತ್ತು ತೆರವುಗೊಳಿಸಿ ಎಫ್ ಐ ಆರ್ ದಾಖಲಾಗಿದೆ.
ಈಶಾನ್ಯ ವಲಯದ ಡಿಸಿಪಿ ಸಜಿತ್ ರವರು ಕೊಟ್ಟ ಆದೇಶದ ಮೇರೆಗೆ ಬಿಬಿಎಂಪಿ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸೇರಿ ರಾಜಕೀಯ ಪಕ್ಷಗಳ, ಶಾಲಾ ಕಾಲೇಜುಗಳ, ಗಣೇಶ ಮೂರ್ತಿ, ಈದ್ ಮಿಲಾದ್ ಶುಭಾಶಯ ಸೇರಿದಂತೆ ತೋರಿಸುವ ಹಾಗೂ ಇತರೆ ಬ್ಯಾನರ್ ಹಾಗೂ ಕಟೌಟುಗಳನ್ನು ತೆರವುಗೊಳಿಸಿ ಎಫ್ಐಆರ್ ದಾಖಲಾಗಿಸಿದೆ ಎಂದು ಡಿಸಿಪಿ ರವರು ಮಾಹಿತಿ ನೀಡಿದರು.
ಎಫ್ ಐ ಆರ್ ದಾಖಲಿಸಿದ ನಂತರ ದೂರು ದಾಖಲಾಗಿರುವ ಸಂಘ ಸಂಸ್ಥೆಗಳ ಹಾಗೂ ಇತರರು ನ್ಯಾಯಾಲಯದಲ್ಲಿ ಕ್ಷಮೆ ಅಥವಾ ತಪ್ಪು ಒಪ್ಪಿಗೆ ಪಡೆದು, ದಂಡ ಪಾವತಿಸಿ ಪ್ರಕರಣವನ್ನು ಅಂತ್ಯಗೊಳ್ಳಿಸಿ ಕೊಳ್ಳಬೇಕೆಂದು ತಿಳಿಸಿದರು.