ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಜೀವನಗಾಥೆಯನ್ನು ಸಾರುವ ಪ್ರತಿಮೆಯ ಲೋಕಾರ್ಪಣೆ ಇಂದು ನಡೆಯಲಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಏಪ್ರಿಲ್ನಲ್ಲಿ 50ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಸಚಿನ್ ಅವರ ಪ್ರತಿಮೆಯನ್ನು ವಾಂಖೆಡೆ ಕ್ರೀಡಾಂಗಣದೊಳಗೆ ಮುಂಬೈ ಕ್ರಿಕೆಟ್ ಸಂಸ್ಥೆ ನಿರ್ಮಿಸಿದೆ.
ಸ್ಟ್ರೋಕ್ ಮಾಡುವ ಭಂಗಿಯಲ್ಲಿರುವ ಪ್ರತಿಮೆಗೆ ಮಂಗಳವಾರ ಅಂತಿಮ ಸ್ಪರ್ಶ ನೀಡಲಾಯಿತು. ಪ್ರತಿಮೆ ಲೋಕಾರ್ಪಣಾ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್ ಸೇರಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಖಜಾಂಚಿ ಆಶಿಶ್ ಶೆಲಾರ್, ಮುಂಬೈ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅಮೋಲ್ ಕಾಳೆ, ಕಾರ್ಯದರ್ಶಿ ಅಜಿಂಕ್ಯ ನಾಯ್ಕ್ ಭಾಗವಹಿಸಲಿದ್ದಾರೆ.