ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ರಾಜ್ಯಕ್ಕೆ ಕಲೆಕ್ಷನ್ ಮಾಡಿಕೊಂಡು ಹೋಗಲು ಬರುತ್ತಾರೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕಲೆಕ್ಷನ್ ಎಂದರೆ ಏನು? ಹೆಗಲ ಮೇಲೆ ಚೀಲ ಹೊತ್ತುಕೊಂಡು ಹೋಗುವುದಾ ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾಲದಲ್ಲೂಅವರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಬರುತ್ತಿದ್ದರು. ಆಗ ನಾವು ಸಹ ಅವರು ಕಲೆಕ್ಷನ್ಗೆ ಬರುತ್ತಿದ್ದಾರೆ ಎಂದು ಹೇಳಬಹು ದಿತ್ತಲ್ಲ ಎಂದಿದದಾರೆ.
ರಾಜ್ಯದಲ್ಲಿ ಬರಗಾಲ ಎದುರಾಗಿದ್ದು, 200 ತಾಲೂಕುಗಳನ್ನು ಬರ ಎಂದು ಘೋಷಿಸಲಾಗಿದ್ದು, ಕೇಂದ್ರದ ಅನುದಾನಕ್ಕಾಗಿ ಪತ್ರ ಬರೆಯಲಾಗಿದೆ. 17 ಸಾವಿರ ಕೋಟಿಗೆ ಮನವಿ ಮಾಡಲಾಗಿದೆ. ಆದರೂ ಕೇಂದ್ರ ಇದುವರೆಗೂ ಒಂದು ಪೈಸೆ ಬಿಡುಗಡೆ ಮಾಡಿಲ್ಲ ಎಂದು ಪರಮೇಶ್ವರ್ ದೂರಿದ್ದಾರೆ.