ಮಾಗಡಿ: ಸಾಕಷ್ಟು ವರ್ಷಗಳ ಬೇಡಿಕೆಗಳಾದ ಕನ್ನಡ ಸಾಹಿತ್ಯ ಪರಿಷತ್ ಭವನ ಹಾಗೂ ಪತ್ರಕರ್ತರ ಭವನ ನಿರ್ಮಾಣ ಮಾಡಲು ನಾವು ಬದ್ದರಾಗಿದ್ದೇವೆ ಎಂದು ಶಾಸಕರಾದ ಹೆಚ್.ಸಿ.ಬಾಲಕೃಷ್ಣ ಹೇಳಿದರು.
ಪಟ್ಟಣದ ಕೋಟೆ ಮೈದಾನದಲ್ಲಿ ತಾಲ್ಲೂಕು ಆಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಾಲ್ಲೂಕು ಆಡಳಿತ ಮತ್ತು ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿ ಒಂದು ತಿಂಗಳೊಳಗೆ ಜಾಗವನ್ನು ಗುರುತಿಸಿಕೊಟ್ಟರೆ ಮುಂದಿನ ರಾಜ್ಯೋತ್ಸವದ ವೇಳೆಗೆ ಕನ್ನಡ ಭವನ ನಿರ್ಮಿಸಲು ನಾವು ಬದ್ದರಾಗಿದ್ದೇವೆ.
ಮಾಗಡಿಯು ನಾಡಪ್ರಭು ಕೆಂಪೇಗೌಡರ ಆಳ್ವಿಕೆ ಪ್ರದೇಶವಾಗಿರುವುದರಿಂದ ಈ ತಾಲ್ಲೂಕಿನಲ್ಲಿ ಜನಪದ ಕಲೆ ಸಂಸ್ಕೃತಿ ಇನ್ನೂ ಜೀವಂತವಾಗಿ ಉಳಿದಿದೆ.ಇವುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ನಾವು ನೀವೆಲ್ಲರೂ ಮಾಡೋಣ. ಎಂದು ತಿಳಿಸಿದರು.
ಸಾಲುಮರದ ತಿಮ್ಮಕ್ಕ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮೂರು ಅದ್ಯಕ್ಷರಾಗಿದ್ದ ಎಚ್.ವಿ.ನಂಜುಂಡಯ್ಯ,ದಲಿತ ಕವಿ ಡಾ.ಸಿದ್ದಲಿಂಗಯ್ಯ,ಮಾಗಡಿ ಸೇರಿದವರು ಎಂಬುದಕ್ಕೆ ಹೆಮ್ಮೆಪಡಬೇಕಿದೆ.ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿರುವ ಕೆ.ಎಲ್.ರಾಹುಲ್ ನಮ್ಮ ಮಾಗಡಿಯ ಕುದೂರಿನ ಕಣನೂರಿನವರು.
ಸರ್ವಶೀಲೆ ಚನ್ನಮ್ಮ,ಹೊನ್ನಪ್ಪ ಭಾಗವತರು, ಪುಂಡಲೀಕ ವಿಠಲ,ಸತ್ಯನಾರಾಯಣರಾವ್, ಸೇರಿದಂತೆ ನೂರು ಜನ ಸೇರಿದಂತೆ ಮಾಗಡಿ ಹೆಸರನ್ನು ಈಗಾಗಲೇ ರಾಜ್ಯ ರಾಷ್ಟ್ರೀಯ ವಿಶ್ವ ಮಟ್ಟದಲ್ಲಿ ಮಾಗಡಿಯ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ.ಇಂತಹ ಸಾಧಕರ ಸ್ಪಷ್ಟವಾದ ಮಾಹಿತಿಯುಳ್ಳ ಪುಸ್ತಕಗಳನ್ನು ಸಾಹಿತ್ಯ ಪರಿಷತ್ ಪ್ರಕಟಿಸಬೇಕು ಎಂದು ಬಾಲಕೃಷ್ಣ ತಾಕೀತು ಮಾಡಿದರು.
ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಮಾತನಾಡಿ ಸಾವಿರಾರು ವರ್ಷಗಳ ಇತಿಹಾಸವುಳ್ಳ ಕನ್ನಡವನ್ನು ಉಚ್ಚರಿಸಲು ಅವಕಾಶ ಪಡೆದಿರುವ ನಾವೇ ಪುಣ್ಯವಂತರು.ನಮ್ಮ ಕಚೇರಿಯ ಅಧಿಕಾರಿಗಳು,ತಾಪಂ ಇಒ ಪುರಸಭಾ ಅಧಿಕಾರಿಗಳ ತಂಡ ನವೆಂಬರ್ ತಿಂಗಳ ಒಳಗಾಗಿ ಮಾಗಡಿ ಪಟ್ಟಣದಲ್ಲಿ ಕನ್ನಡ ಭವನ ಪತ್ರಕರ್ತರ ಸಂಘಕ್ಕೆ ನಿವೇಶನ ಹುಡುಕಿಕೊಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಸನ್ಮಾನ:ಯುವಕವಿ ತೋಟದಮನೆ ಗಿರೀಶ್,ಸೋಲೂರಿನ ಸಾಕಮ್ಮ,ಕಲಾವಿದ ಆಗಲಕೋಟೆ ಸತ್ಯನಾರಾಯಣರಾವ್,ಜನಪದ ತರಬೇತುದಾರ ಸಾತನೂರಿನ ಮುನಿಭೈರಪ್ಪ ಇವರಿಗೆ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ತಾಪಂ ಇಒ ಚಂದ್ರು, ಪುರಸಭಾ ಮುಖ್ಯಾಧಿಕಾರಿ ಶಿವರುದ್ರಯ್ಯ, ಇಒಎಸ್ಸಿ ಚಂದ್ರಶೇಖರ್, ಟಿ.ಎಚ್.ಒ.ಚಂದ್ರಶೇಖರ್, ಸಿ.ಡಿ.ಪಿ.ಒ.ಬಿಎಲ್ ಸುರೇಂದ್ರ, ಅಕ್ಷರ ದಾಸೋಹ ಅಧಿಕಾರಿ ಗಂಗಾಧರ್, ಕಸಾಪ ಅದ್ಯಕ್ಷ ತಿಪ್ಪಸಂದ್ರ ಪದ್ಮನಾಭ, ಮಾಜಿ ಅದ್ಯಕ್ಷೆ ಕಲ್ಪನಾಶಿವಣ್ಣ, ದಲಿತ ಮುಖಂಡ ಕಲ್ಕೆರೆ ಶಿವಣ್ಣ,ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಪ್ರಕಾಶ್,ಭೂಬ್ಯಾಂಕ್ ಅದ್ಯಕ್ಷ ಪಿ.ಚಂದ್ರೇಗೌಡ, ಪುರಸಭಾ ಸದಸ್ಯರಾದ ಶಿವಕುಮಾರ್, ಶಿವರುದ್ರಮ್ಮ, ರಿಯಾಜ್, ಕಿಸಾನ್ ಕಾಂಗ್ರೆಸ್ ಜಿಲ್ಲಾದ್ಯಕ್ಷ ಆಗ್ರೋ ಪುರುಷೋತ್ತಮ್, ತಿರುಮಲೆ ಶಿವಕುಮಾರ್ ಸೇರಿದಂತೆ ಮತ್ತಿತರಿದ್ದರು.