ಅರ್ಜುನ್ ಚಕ್ರವರ್ತಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗಷ್ಟೇ ಅನಾವರಣಗೊಂಡಿದೆ. ಕ್ರೀಡಾಂಗಣದ ಮಧ್ಯಭಾಗದಲ್ಲಿ ನಿಂತು, ಪದಕವನ್ನು ಹಿಡಿದುಕೊಂಡು ಮೈಕ್ ಮುಂದೆ ತಮ್ಮ ಗೆಲುವಿನ ಕ್ಷಣವನ್ನು ಅರ್ಜುನ್ ಚಕ್ರವರ್ತಿ ವಿವರಿಸಿದ್ದಾರೆ. ವಿಕ್ರಾಂತ್ ರುದ್ರ ನಿರ್ದೇಶನದ ವಿಜಯ ರಾಮರಾಜು ಅರ್ಜುನ್ ಚಕ್ರವರ್ತಿಯಾಗಿ ನಟಿಸಿದ್ದು, ಸಿಜಾ ರೋಸ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಅರ್ಜುನ್ ಚಕ್ರವರ್ತಿ, 1980ರ ದಶಕದಲ್ಲಿ ಭಾರತವನ್ನು ಪ್ರತಿನಿಧಿಸಿದ ಕಬಡ್ಡಿ ಆಟಗಾರ ನೈಜ ಕಥೆಯನ್ನು ಆಧರಿಸಿದೆ. ಒಬ್ಬ ಕ್ರೀಡಾಪಟುವಿನ ಜೀವನದ ಹೋರಾಟಗಳು ಮತ್ತು ಗೆಲುವಿನ ಸುತ್ತಾ ಸಿನಿಮಾ ಸಾಗುತ್ತದೆ. ಪೋಷಕ ಪಾತ್ರಗಳಲ್ಲಿ ಅಜಯ್, ದಯಾನಂದ ರೆಡ್ಡಿ, ಅಜಯ್ ಘೋಷ್ ಮತ್ತು ದುರ್ಗೇಶ್ ಇದ್ದಾರೆ.
ವಿಘ್ನೇಶ್ ಬಾಸ್ಕರನ್ ಸಂಗೀತ ಮತ್ತು ಜಗದೀಶ್ ಚೀಕಾಟಿ ಛಾಯಾಗ್ರಹಣವಿದೆ. ಗ್ಯಾನೆಟ್ ಸೆಲ್ಯುಲಾಯ್ಡ್ ಅಡಿಯಲ್ಲಿ ನಿರ್ಮಾಪಕ ಶ್ರೀನಿ ಗುಬ್ಬಾಳ ಚಿತ್ರಕ್ಕೆ ಹಣ ಹಾಕಿದ್ದಾರೆ. ಚಿತ್ರವನ್ನು ತೆಲುಗು ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗುತ್ತಿದ್ದು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಡಬ್ ಮಾಡಲಾಗುತ್ತದೆ. ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಿರ್ಮಾಪಕ ಶ್ರೀನಿ ಗುಬ್ಬಾಳ, ಅರ್ಜುನ್ ಚಕ್ರವರ್ತಿ: ಜರ್ನಿ ಆಫ್ ಅನ್ಸಂಗ್ ಚಾಂಪಿಯನ್” ಕೇವಲ ಸಿನಿಮಾವಲ್ಲ.
ಸವಾಲುಗಳನ್ನು ಮೀರಿ ಎದ್ದುನಿಲ್ಲುವ ಮತ್ತು ನಮಗೆಲ್ಲರಿಗೂ ಸ್ಫೂರ್ತಿ ನೀಡುವ ವ್ಯಕ್ತಿಗಳ ಅದಮ್ಯ ಮನೋಭಾವಕ್ಕೆ ಗೌರವವಾಗಿದೆ. ಅರ್ಜುನ್ ಚಕ್ರವರ್ತಿ ಸಿನಿಮಾ ಮೂಲಕ ನಾವು ಮಾನವ ಇಚ್ಛೆಯ ಶಕ್ತಿಯನ್ನು ಮತ್ತು ಮಾನವ ಆತ್ಮದ ವಿಜಯವನ್ನು ಪ್ರದರ್ಶಿಸಲು ಬಯಸುತ್ತೇವೆ ಎಂದು ತಿಳಿಸಿದ್ದಾರೆ..
ತೆರೆ ಮೇಲೆ ಸಾಧಕಿಯ ಯಶೋಗಾಥೆಇತ್ತೀಚೆಗೆ ಚಂದನವನದಲ್ಲಿ ಸತ್ಯಘಟನೆಗಳ ಸಿನಿಮಾಗಳು ಜನರ ಮನಸೆಳೆಯುತ್ತಿದೆ. ಅದೇ ರೀತಿ ಬದುಕಿನಲ್ಲಿ ಸಾಧನೆ ಮಾಡಿರುವವರ ಚಿತ್ರಗಳು ಇಂದಿನ ಯುವಜನತೆಗೆ ಪ್ರೇರಣೆಯಾಗುತ್ತಿದೆ. ಆ ಸಾಲಿಗೆ ರಾಮನಗರದ ವಿ.ಆಶಾ ಸೇರ್ಪಡೆಯಾಗುತ್ತಾರೆ. ಇವರು 2016ರಿಂದ ಅನಾಥ ಶವಗಳಿಗೆ ವಾರಸುದಾರರಾಗಿ ಅಂದಾಜು 5000 ಶವಗಳಿಗೆ ಅಂತಿಮಕ್ರಿಯೆಗಳನ್ನು ಮಾಡಿಸುವಲ್ಲಿ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ. ಆಂಬುಲೆನ್ಸ್ ಚಾಲಕರಾಗಿರುವ ಮಾವ ಪ್ರವೀಣ್ಕುಮಾರ್ ನೀಡಿದ ಧೈರ್ಯ, ಪೆÇ್ರೀತ್ಸಾಹವೇ ಇಂತಹ ಕೈಂಕರ್ಯ ಮಾಡಲು ಸಾಧ್ಯವಾಗುತ್ತಿದೆ.