ಕೆಲವೇ ದಿನಗಳಲ್ಲಿ ಐಪಿಎಲ್ ಮಿನಿ ಹರಾಜು ನಡೆಯಲಿದೆ. ಈ ನಡುವಲ್ಲೇ ಆರ್ಸಿಬಿ ತಂಡ ಆಟಗಾರ, ಇಂಗ್ಲೆಂಡ್ ತಂಡದ ಖ್ಯಾತ ಆಲ್ರೌಂಡರ್ ಡೇವಿಡ್ ವಿಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಎಲ್ಲಾ 10 ಫ್ರಾಂಚೈಸಿಗಳು ಇಂಡಿಯನ್ ಪ್ರೀಮಿಯಲ್ ಲೀಗ್ 17 ನೇ ಆವೃತ್ತಿಗೆ ಸಜ್ಜಾಗುತ್ತಿವೆ. ಈಗಾಗಲೇ ಆಯೋಜಕರು ಈ ಬಾರಿ ಐಪಿಲ್ ಪಂದ್ಯಾವಳಿಯನ್ನು ಅದ್ದೂರಿಯಾಗಿ ಆಚರಿಸಲು ಮುಂದಾಗಿದ್ದಾರೆ. ಡಿಸೆಂಬರ್ತಿಂಗಳಲ್ಲಿ ಹರಾಜು ನಡೆಸಲು ದಿನಾಂಕ ಫಿಕ್ಸ್ ಆಗಿದೆ. ನೆಚ್ಚಿನ ಆಟಗಾರ ರನ್ನು ಮಿನಿ ಹರಾಜು ಮೂಲಕ ಪ್ರಾಂಚೈಸಿಗಳು ಖರೀದಿ ಮಾಡುತ್ತಿವೆ.
ಆರ್ಸಿಬಿ ತಂಡದ ಸ್ಟಾರ್ ಆಟಗಾರ ಡೇವಿಡ್ ವಿಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. 2015ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಇಂಗ್ಲೆಂಡ್ ತಂಡದ ಪರ ಪದಾರ್ಪಣೆ ಮಾಡಿದ್ದ ಡೇವಿಡ್ ವಿಲ್ಲಿ ಅವರು, ಇದುವರೆಗೆ ಒಟ್ಟು 70 ಏಕದಿನ ಪಂದ್ಯಗಳನ್ನು ಆಡಿದ್ದು, 627 ರನ್ ಗಳಿಸಿದ್ದಾರೆ. ಆಲ್ರೌಂಡರ್ ಆಗಿರುವ ಡೇವಿಡ್ ವಿಲ್ಲಿ 94 ವಿಕೆಟ್ ಪಡೆದುಕೊಒಡಿದ್ದಾರೆ.